Tuesday, April 23, 2024
Homeಕರಾವಳಿಉಡುಪಿಕುಂದಾಪುರ: ಎಎಸ್ಪಿ ನಿಖಿಲ್ ಬುಳ್ಳಾವರ್ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ, ಹಣಕ್ಕಾಗಿ ಬೇಡಿಕೆ

ಕುಂದಾಪುರ: ಎಎಸ್ಪಿ ನಿಖಿಲ್ ಬುಳ್ಳಾವರ್ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ, ಹಣಕ್ಕಾಗಿ ಬೇಡಿಕೆ

spot_img
- Advertisement -
- Advertisement -

ಕುಂದಾಪುರ: ಕಿಡಿಗೇಡಿಗಳ್ಯಾರೋ ಭಟ್ಕಳ ಉಪವಿಭಾಗದ ಎಎಸ್ಪಿ ನಿಖಿಲ್ ಬುಳ್ಳಾವರ್ ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆಯೊಂದನ್ನು ತೆರೆದು ನಿಖಿಲ್ ರ ಹೆಸರಲ್ಲಿ ಫೇಸ್ಬುಕ್ ನಲ್ಲಿ ಹಣ ಕೇಳಿತ್ತಿರುವುದಾಗಿ ಸ್ವತಃ ಎಎಸ್ಪಿ ನಿಖಿಲ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದು ಈತನಿಗೆ ಯಾರು ಕೂಡ ಪ್ರತಿಕ್ರಿಯೆ ನೀಡದಿರಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಕುಮಟಾ ಪೊಲೀಸ್ ಠಾಣೆಯ ಪಿಎಸ್‌ಐ ಹೆಸರಲ್ಲಿ ಇದೇ ರೀತಿಯ ನಕಲಿ ಫೇಸ್ಬುಕ್ ಖಾತೆ ತೆರೆದು ಹಣ ಬೇಡುತ್ತಿರುವ ಘಟನೆ ಮಾಸುವ ಮುನ್ನವೇ ಇಂದು ಮತ್ತೊಂದು ಅದೇ ರೀತಿಯ ಘಟನೆ ವರದಿಯಾಗಿದೆ. ನಿಖಿಲ್ ಅವರ ಪೋಸ್ಟ್ ಗೆ ಕಾಮೆಂಟಿಗರು ಹಲವು ರೀತಿಯಲ್ಲಿ ಕಮೆಂಟ್ ಮಾಡಿದ್ದು ಇಂತಹ ರಾಸ್ಕಲ್ ಗಳಿಗೆ  ಗಲ್ಲಿಗೆ ಹಾಕಬೇಕು ಇದು ಈಗ ವಂಚನೆಯ ಹೊಸ ಪ್ರವೃತ್ತಿ ಬೆಳೆಯುತ್ತಿದೆ ಎಂದು ಬರೆದುಕೊಂಡಿದ್ದಾರೆ.  

ಲಾಕ್‌ಡೌನ್ ಪರಿಣಾಮವು ಸ್ಪ್ಯಾಮರ್‌ಗಳಿಗೆ 200 ಬಕ್ಸ್ ಅಮೂಲ್ಯವಾಗಿದೆ ಎಂದು ಓರ್ವ ಕಾಮೆಂಟಿಸಿದರೆ, ಮತ್ತೊರ್ವರು ಅಧಿಕಾರಿಗಳನ್ನೇ ಬಿಡುತ್ತಿಲ್ಲ ಇನ್ನೂ ಕಾಮನ್ ಪೀಪಲ್ ಗತಿ ಏನು ಎಂದಿದ್ದಾರೆ. ಸಾಮಾಜಿಕ ಜಾಲಾತಾಣಗಳು ಈಗ ಅತಿಯಾಗಿ ದುರ್ಬಳಕೆಯಾಗುತ್ತಿದ್ದು ರಾಜಕೀಯ ಪುಡಾರಿಗಳಿಂದ ಹಿಡಿದು, ವೃತ್ತಿನಿರತ ವಂಚಕರು ಈಗ ತಮ್ಮ ಜಾಲಾವನ್ನು ಫೇಸ್ಬುಕ್ ಮೂಲಕ ವಿಸ್ತರಿಸಿಕೊಳ್ಳುತ್ತಿದ್ದಾರೆ. ಇದಕ್ಕೆಲ್ಲ ಸೈಬರ್ ಕಾನೂನು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂಬ ಆಗ್ರಹಗಳು ಕೇಳಿ ಬರುತ್ತಿವೆ.

ವ್ಯಕ್ತಿ ನಿಂದನೆ, ಧರ್ಮನಿಂದನೆ, ಜಾತಿ ನಿಂದನೆಗಳು ಈ ಫೇಸ್ಬುಕ್ ಮತ್ತು ಇತರ ಸಾಮಾಜಿಕ ಜಾಲಾತಾಣಗಳಲ್ಲಿ ಹೆಚ್ಚಾಗುತ್ತಿದ್ದು ಇದರಿಂದಾಗಿ ಸಮಾಜದಲ್ಲಿ ಅಶಾಂತಿ, ಅಸಹನೆ, ಕೋಮುಗಲಭೆಗಳು ಹೆಚ್ಚಾಗಲು ಕಾರಣವಾಗಿದೆ. ಈ ಬಗ್ಗೆ ಸೈಬರ್ ಠಾಣೆಗಳು ಅತೀ ಹೆಚ್ಚಿನ ನಿಗಾ ವಹಿಸಿ ಪಾತಕಿ ಗಳ ಮೇಲೆ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ಅವಶ್ಯಕತೆಯಿದೆ ಎಂಬ.  ಆಗ್ರಹ ಕೇಳಿ ಬಂದಿದೆ.

- Advertisement -
spot_img

Latest News

error: Content is protected !!