Sunday, June 7, 2026
Homeತಾಜಾ ಸುದ್ದಿಸಿಮ್ ಇಲ್ಲದ ಮೊಬೈಲ್ - ನಟಿ ಸಂಜನಾಗೆ ಮುಗಿಯದ "ಸಂಕಷ್ಟ"

ಸಿಮ್ ಇಲ್ಲದ ಮೊಬೈಲ್ – ನಟಿ ಸಂಜನಾಗೆ ಮುಗಿಯದ “ಸಂಕಷ್ಟ”

- Advertisement -
- Advertisement -

ಬೆಂಗಳೂರು: ಕೋರ್ಟ್ ತೀರ್ಪಿನ ನಂತರ ನಿನ್ನೆ ನಟಿ ರಾಗಿಣಿ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಗೊಂಡ ನಂತರ ಸಾಂತ್ವನ ಕೇಂದ್ರದಲ್ಲಿ ನಟಿ ಸಂಜನಾ ಒಂಟಿಯಾಗಿದ್ದಾರೆ. ಹಿಂದೆ ತನಿಖೆ ಅವಧಿಯಲ್ಲಿ ಇಬ್ಬರು ಜೊತೆಯಾಗಿದ್ದದ್ದು ಮಾನಸಿಕ ಸ್ಥೈರ್ಯ ಹೆಚ್ಚಿಸಿತ್ತು ಆದರೆ ಈಗ ಸಂಜನಾ ಒಬ್ಬಂಟಿಯಾಗಿ ಪ್ರಶ್ನೆ ಎದುರಿಸ ಬೇಕಿದೆ.
ಸಂಜನಾ ಮೊಬೈಲ್​ ಮೇಲೆ ಸಿಸಿಬಿ ಪೊಲೀಸರ ಕಣ್ಣುಬಿದ್ದಿದ್ದು. ಮೂರು ಮೊಬೈಲ್​ಗಳು ರಿಟ್ರೀವ್ ಆಗಿರುವುದು ಬೆಳಕಿಗೆ ಬಂದಿದೆ. ಸಿಮ್ ಇಲ್ಲದೇ ಮೊಬೈಲ್ ಫೋನ್​ ಬಳಕೆ ಮಾಡಿದ್ದು ಏಕೆ ಎಂಬುದು ಮುಖ್ಯ ಪ್ರಶ್ನೆ ಯಾವ ಕಾರಣಕ್ಕಾಗಿ ವೈಫೈ ಬಳಕೆ ಮಾಡಿ ಮೊಬೈಲ್​ ಗಳನ್ನ ಬಳಸಲಾಗುತ್ತಿತ್ತು ಎಂದು ತಿಳಿದಿಲ್ಲ ಈ ನಡುವೆ ಸಂಜನಾರಿಗೆ ಸಿಸಿಬಿ ಅಧಿಕಾರಿಗಳು ಇನ್ನಷ್ಟು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಆದರೆ ಸಂಜನಾ ತನಿಖೆಗೆ ಸಂಪೂರ್ಣವಾಗಿ ಸಹಕಾರ ನೀಡುತ್ತಿಲ್ಲ

ಈ ಹಿಂದೆ ವಿಚಾರಣೆ ವೇಳೆ ಸಂಜನಾ ಸರಿಯಾಗಿ ತನಿಖೆಗೆ ಸಹಕರಿಸದ ಹಿನ್ನೆಲೆಯಲ್ಲಿ, ಮತ್ತೆ ವಿಚಾರಣೆ ನಡೆಸಲು ವಶಕ್ಕೆ ಪಡೆದಿರುವ ಸಿಸಿಬಿ ಅಧಿಕಾರಿಗಳು, ಈಕೆಯ ಬಾಯಿ ಬಿಡಿಸಿ ಮತ್ತಷ್ಟು ಮಹತ್ವದ ಮಾಹಿತಿ ಕಲೆಹಾಕಲು ಯೋಜನೆ ರೂಪಿಸಿದ್ದಾರೆ.ಇದರಿಂದ ಸಂಜನಾಗೆ ಇನ್ನಷ್ಟು ಸಂಕಷ್ಟ ಎದುರಾಗಿದೆ.

- Advertisement -

Latest News

error: Content is protected !!