Sunday, July 5, 2026
Homeತಾಜಾ ಸುದ್ದಿಅನ್ನ, ನೀರು, ಗಾಳಿಯಿಲ್ಲದೆ 33 ದಿನಗಳ ಭೂಗತ ಸಮಾಧಿ! ಗದಗದ ಶ್ರೀಗಳ ಪವಾಡ ಕಂಡು ಅಚ್ಚರಿಗೊಂಡ...

ಅನ್ನ, ನೀರು, ಗಾಳಿಯಿಲ್ಲದೆ 33 ದಿನಗಳ ಭೂಗತ ಸಮಾಧಿ! ಗದಗದ ಶ್ರೀಗಳ ಪವಾಡ ಕಂಡು ಅಚ್ಚರಿಗೊಂಡ ಭಕ್ತರು

- Advertisement -
- Advertisement -

ಗದಗ; ಅನ್ನವಿಲ್ಲ, ನೀರಿಲ್ಲ, ಕೊನೆಗೆ ಉಸಿರಾಡಲು ಗಾಳಿ ಮತ್ತು ಬೆಳಕೂ ಇಲ್ಲ! ಬರೋಬ್ಬರಿ ೩೩ ದಿನಗಳು ಅಂದ್ರೆ ಸತತ 775 ಗಂಟೆಗಳ ಕಾಲ ಭೂಗತ ಸಮಾಧಿಯಲ್ಲಿದ್ದ ಸ್ವಾಮೀಜಿಯೊಬ್ಬರು ಈಗ ಜೀವಂತವಾಗಿ ಹೊರಬಂದಿದ್ದಾರೆ!

ಹೌದು, ಗದಗ ಜಿಲ್ಲೆಯ ಅಂತೂರು ಬೆಂತೂರು ಗ್ರಾಮದ ಬೂದೀಶ್ವರ ಮಠದ ರಾಚೂಟೇಶ್ವರ ಸ್ವಾಮೀಜಿಯವರು ಇಂತದ್ದೊಂದು ನಂಬಲಾಗದ ಪವಾಡ ಸದೃಶ ಶಿವಯೋಗ ಸಮಾಧಿಯನ್ನ ಯಶಸ್ವಿಯಾಗಿ ಪೂರೈಸಿದ್ದಾರೆ. ಮಹದಾಯಿ ಯೋಜನೆ ಜಾರಿ ಮತ್ತು ಲೋಕ ಕಲ್ಯಾಣಕ್ಕಾಗಿ ಜೂನ್ ೩ರ ಮಧ್ಯರಾತ್ರಿ ಸಮಾಧಿ ಸ್ಥಿತಿಗೆ ಹೋಗಿದ್ದ ಸ್ವಾಮೀಜಿಯವರನ್ನ, ಸಿಮೆಂಟ್‌ನಿಂದ ಸಂಪೂರ್ಣವಾಗಿ ಪ್ಯಾಕ್ ಮಾಡಲಾಗಿದ್ದ ಕಲ್ಲಿನ ಮಂಟಪದೊಳಗೆ ಕೂರಿಸಲಾಗಿತ್ತು.

೩೩ ದಿನಗಳ ಕಾಲ ಉಸಿರನ್ನೇ ಬಿಗಿಹಿಡಿದು ಕಠಿಣ ಅನುಷ್ಠಾನದಲ್ಲಿದ್ದ ಶ್ರೀಗಳು, ಇವತ್ತು ಸಮಾಧಿಯಿಂದ ಸುರಕ್ಷಿತವಾಗಿ ಹಾಗೂ ಆರೋಗ್ಯವಾಗಿ ಹೊರಬಂದಿದ್ದಾರೆ. ಈ ಅಚ್ಚರಿಯನ್ನ ಕಣ್ಣಾರೆ ನೋಡಲು ಮತ್ತು ಸ್ವಾಮೀಜಿಗಳ ದರ್ಶನ ಪಡೆಯಲು ಕರ್ನಾಟಕ ಮಾತ್ರವಲ್ಲದೆ ತೆಲಂಗಾಣದಿಂದಲೂ ಸಾವಿರಾರು ಭಕ್ತರು ಮಠಕ್ಕೆ ಹರಿದು ಬರುತ್ತಿದ್ದಾರೆ. ಹೆತ್ತ ತಾಯಿಯಂತೆ ಆತಂಕದಲ್ಲಿದ್ದ ಗ್ರಾಮಸ್ಥರು ಈಗ ಸ್ವಾಮೀಜಿಗಳನ್ನ ನೋಡಿ ಭಾವುಕರಾಗಿದ್ದಾರೆ. ಮಾನವ ಸಹಜ ಶಕ್ತಿಯನ್ನೂ ಮೀರಿದ ಈ ಶಿವಯೋಗ ಸಮಾಧಿ ಈಗ ಇಡೀ ರಾಜ್ಯದಲ್ಲೇ ಸಂಚಲನ ಮೂಡಿಸಿದೆ!

 

- Advertisement -

Latest News

error: Content is protected !!