Saturday, May 4, 2024
Homeತಾಜಾ ಸುದ್ದಿಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ: ಐಂದ್ರಿತಾ ರೇ-ದಿಗಂತ್​ ಗೆ ಸಿಸಿಬಿ ಯಿಂದ ನೋಟಿಸ್

ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ: ಐಂದ್ರಿತಾ ರೇ-ದಿಗಂತ್​ ಗೆ ಸಿಸಿಬಿ ಯಿಂದ ನೋಟಿಸ್

spot_img
- Advertisement -
- Advertisement -

ಬೆಂಗಳೂರು: ಎರಡು ದಿನಗಳ ಹಿಂದೆ ನಟಿ ಐಂದ್ರಿತಾ ರೇಯವರು ಶ್ರೀಲಂಕಾದ ಕ್ಯಾಸಿನೋಗೆ ಹೋಗಿದ್ದ ವಿಡಿಯೋ, ಫೋಟೋ ವೈರಲ್‌ ಆಗಿತ್ತು. ಈ ವೇಳೆ ಈ ಪ್ರಕರಣದ ಆರೋಪಿ ಶೇಖ್‌ ಫಾಝಿಲ್‌ ಜೊತೆ ಇದ್ದ ಫೋಟೋಗಳು ಸಹ ಸಿಕ್ಕಿದ್ದು, ಈ ಹಿನ್ನಲೆಯಲ್ಲಿ ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿಗಾಗಿ ನಟಿ ಐಂದ್ರಿತಾ ರೇ ಮತ್ತು ನಟ ದಿಗಂತ್​ಗೆ ಸಿಬಿಬಿ ನೋಟಿಸ್​ ಜಾರಿ ಮಾಡಿದೆ.

ಇವರಿಬ್ಬರನ್ನು ಸಿಸಿಬಿ ಹೆಚ್ಚಿನ ವಿಚಾರಣೆಗಾಗಿ ನಾಳೆ(ಬುಧವಾರ) ಬೆಳಗ್ಗೆ 11 ಗಂಟೆಗೆ ಕಚೇರಿಗೆ ಹಾಜರಾಗಲು ತಿಳಿಸಿದೆ.

ಡ್ರಗ್ಸ್​ ಕೇಸ್​ನಲ್ಲಿ ಸಿಸಿಬಿ ಪೊಲೀಸರಿಂದ ತಲೆಮರೆಸಿಕೊಂಡಿರುವ ಶೇಖ್ ಫಾಝಿಲ್​, ಕ್ಯಾಸಿನೋ ಪಾರ್ಟಿಗೆ ಸೆಲೆಬ್ರಿಟಿಗಳ ಕೈಲಿ ಇತರರನ್ನು ಇನ್ವೈಟ್​ ಮಾಡಿಸುತ್ತಿದ್ದ. ಈ ಪಾರ್ಟಿಗೆ ಬರುವಂತೆ ಸ್ಯಾಂಡಲ್​ವುಡ್​ ನಟಿ ಐಂದ್ರಿತಾ ರೇ ಕೂಡ ಪ್ರಮೋಟ್​ ಮಾಡಿದ್ದು, ಈ ವಿಡಿಯೋ ಇದೀಗ ವೈರಲ್​ ಆಗಿತ್ತು.

- Advertisement -
spot_img

Latest News

error: Content is protected !!