Friday, April 26, 2024
Homeಜ್ಯೋತಿಷ್ಯಶನಿವಾರದಂದು ಈ ತಪ್ಪುಗಳನ್ನು ಮಾಡಿದರೆ ಶನಿದೇವನ ಶಾಪ ತಪ್ಪಿದ್ದಲ್ಲ

ಶನಿವಾರದಂದು ಈ ತಪ್ಪುಗಳನ್ನು ಮಾಡಿದರೆ ಶನಿದೇವನ ಶಾಪ ತಪ್ಪಿದ್ದಲ್ಲ

spot_img
- Advertisement -
- Advertisement -
  • ಶನಿವಾರದಂದು ಚಾಕೋಲೇಟ್‌ಗಳನ್ನು ಯಾರಿಗಾದರೂ ಉಡುಗೊರೆಯಾಗಿ ಕೊಟ್ಟರೆ ಮಾನಸಿಕ ಅಸಮತೋಲನ ಕಾಡುವುದು. ಮುತ್ತುಗಳನ್ನು ಉಡುಗೊರೆಯಾಗಿ ನೀಡಿದರೆ ಎರಡೂ ಕುಟುಂಬಗಳ ಮಧ್ಯೆ ದೈಹಿಕ ಹಲ್ಲೆಗಳಾಗಬಹುದು ಅಥವಾ ಸಾವು ಸಂಭವಿಸುವುದೆಂದು ಹೇಳಲಾಗುತ್ತದೆ.
  • ಯಾರಿಗಾದರೂ ಕಬ್ಬಿಣ ಅಥವಾ ಉಕ್ಕಿನಿಂದ ಮಾಡಿರುವಂತಹ ಕತ್ತರಿಯನ್ನು ನೀಡುವುದರಿಂದ ಇಬ್ಬರ ನಡುವೆ ಸಾಕಷ್ಟು ಉದ್ವಿಗ್ನತೆ ಉಂಟಾಗುವುದು.
  • -ಶನಿವಾರದಂದು ಕೆಂಪು ಬಟ್ಟೆಯನ್ನು ಉಡುಗೊರೆಯಾಗಿ ನೀಡಿದರೆ ಆ ವ್ಯಕ್ತಿಯು ಸಮಾಜದ ಮುಂದೆ ತಲೆ ತಗ್ಗಿಸಬೇಕಾದ ಸಂದರ್ಭ ಬರುವುದು.
  • -ಮಲ್ಲಿಗೆಯ ಸುಗಂಧದ್ರವ್ಯವನ್ನು ಉಡುಗೊರೆಯಾಗಿ ನೀಡುವುದರಿಂದ ಆ ವ್ಯಕ್ತಿಯು ಖಾಯಿಲೆ ಬೀಳಬಹುದು.
  • -ಕೆಂಪು ಬಣ್ಣದ ಪೆನ್‌ ಯಾರಿಗಾದರೂ ಉಡುಗೊರೆ ನೀಡಿದಲ್ಲಿ ಅವರು ಆರ್ಥಿಕ ಸಮಸ್ಯೆಗಳನ್ನು ನೀಡಬಾರದೆಂದು ಹೇಳುತ್ತಾರೆ.
  • -ಅಡುಗೆಗೆ ಬಳಸುವ ಲೋಹದ ಪಾತ್ರೆಗಳನ್ನು ಉಡುಗೊರೆಯಾಗಿ ನೀಡುವುದರಿಂದಲೂ ವ್ಯವಹಾರದಲ್ಲಿ ನಷ್ಟವುಂಟಾಗುವುದು.
  • ಬಿಳಿ ಬಣ್ಣದ ಬಟ್ಟೆಗಳ ಉಡುಗೊರೆಯು ವೈವಾಹಿಕ ಜೀವನದಲ್ಲಿ ಸಮಸ್ಯೆ ಹಾಗೂ ಪತಿಪತ್ನಿಯರ ನಡುವಿನ ಸಂಬಂಧದಲ್ಲಿ ಸಮಸ್ಯೆಯನ್ನುಂಟು ಮಾಡುತ್ತದೆ.

ಶನಿ ಎಂದರೆ ಒಂದು ರೀತಿಯ ಭಯ ಎಲ್ಲರಿಗೂ ಇದ್ದೇ ಇದೆ. ಜನರ ಈ ನಂಬಿಕೆಗೆ ಹೊರತಾಗಿ ಶನಿಯು ದುಷ್ಟ ಗ್ರಹವಲ್ಲ, ಉದ್ದೇಶಪೂರ್ವಕವಾಗಿ ಯಾರಿಗೂ ಹಾನಿ ಮಾಡುವುದಿಲ್ಲ. ಶನಿಯ ಉಪಸ್ಥಿತಿಯು ವ್ಯಕ್ತಿಯ ಜೀವನದಲ್ಲಿ ಶಿಸ್ತು, ಸಮಯಪ್ರಜ್ಞೆ ಮತ್ತು ಸದಾಚಾರವನ್ನು ಕಲಿಸುತ್ತದೆ. ಇದನ್ನು ಪಾಲಿಸದವರನ್ನು ಶನಿಯು ಖಂಡಿತವಾಗಿಯೂ ಕೆಳಗೆ ಬೀಳುವಂತೆ ಮಾಡುತ್ತಾನೆ ಎನ್ನುವುದು ಸತ್ಯ. ಶನಿಯನ್ನು ಸಂತುಷ್ಟಗೊಳಿಸಬೇಕೆಂದರೆ ಪ್ರತಿಶನಿವಾರದಂದು ಎಳ್ಳೆಣ್ಣೆ ಹಾಗೂ ಕಪ್ಪು ಎಳ್ಳನ್ನು ಶನಿಗೆ ಅರ್ಪಿಸಬೇಕು.

ಶನಿಯು ಸಕಾರಾತ್ಮಕ ಅಂಶಗಳಾದ ಅಧಿಕಾರ, ನಾಯಕತ್ವ, ಯಶಸ್ಸನ್ನು ನೀಡುವ ಜೊತೆಗೆ ನಕಾರಾತ್ಮಕ ಅಂಶಗಳಾದ ದುರಾಸೆ, ವ್ಯಸನ, ಅಪರಾಧ ಹಾಗೂ ಅಪಘಾತವನ್ನು ನಿಯಂತ್ರಿಸುತ್ತಾನೆ. ಶಿವಭಕ್ತನಾಗಿರುವಂತಹ ಶನಿಯು ಸಮೃದ್ಧಿಗಾಗಿ ಹಾಗೂ ಸುದೀರ್ಘ ಜೀವನಕ್ಕಾಗಿ ನಿರಂತರವಾಗಿ ಅವನನ್ನು ಪ್ರಾರ್ಥಿಸುತ್ತಿದ್ದನು. ಹಾಗಾಗಿ ಶನಿಯ ಉತ್ತಮ ಫಲವನ್ನು ಪಡೆಯಲು ಶಿವನನ್ನೂ ಆರಾಧಿಸಬಹುದು.

- Advertisement -
spot_img

Latest News

error: Content is protected !!