ಜಾನ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯ ಮತ್ತು ದಿ ಸೆಂಟರ್ ಫಾರ್ ಡಿಸೀಸ್ ಡೈನಾಮಿಕ್ಸ್, ಎಕನಾಮಿಕ್ಸ್ ಅಂಡ್ ಪಾಲಿಸಿ (ಸಿಡಿಡಿಇಪಿ) ಈ ವರದಿಯ ಪ್ರಕಾರ ಭಾರತದಲ್ಲಿ ಸುಮಾರು ಇನ್ನೂ ನಾಲ್ಕು ತಿಂಗಳು ಕೊರೊನಾ ಕಾಡಲಿದೆಯಂತೆ. ವರದಿಯಲ್ಲಿ ಕೊರೊನಾ ನಿಯಂತ್ರಣದ ವಿಧಾನವನ್ನು ಹೇಳಲಾಗಿದೆ. ಭಾರತದ ಅಧಿಕೃತ ವೆಬ್‌ಸೈಟ್‌ಗಳು ಬಿಡುಗಡೆ ಮಾಡಿದ ಡೇಟಾವನ್ನು ಬಳಸಿಕೊಂಡು ಈ ವರದಿಯನ್ನು ಸಿದ್ಧಪಡಿಸಿದೆ.
ಭಾರತದಲ್ಲಿ ಕೊರೊನಾ ಜುಲೈವರೆಗೆ ಕಾಡಲಿದೆ. ಆಗಸ್ಟ್ ವೇಳೆಗೆ ಇದು ಕಡಿಮೆಯಾಗಲು ಶುರುವಾಗುತ್ತದೆ. ಸುಮಾರು 25 ಲಕ್ಷ ಜನರು ಈ ಸೋಂಕಿಗೆ ತುತ್ತಾಗಲಿದ್ದಾರೆಂದು ವರದಿಯಲ್ಲಿ ಹೇಳಲಾಗಿದೆ. ಭಾರತದಲ್ಲಿ ಸೋಂಕಿಗೆ ತುತ್ತಾದವರ ಸಂಖ್ಯೆ ಹೆಚ್ಚಿದೆ. ಆದ್ರೆ ಲಕ್ಷಣ ಸೌಮ್ಯವಾಗಿದೆ. ಅದು ಹೆಚ್ಚಾದಾಗ ಅದ್ರ ಗಂಭೀರತೆ ಅರಿವಿಗೆ ಬರಲಿದೆ ಎಂದು ವಿಶ್ವವಿದ್ಯಾನಿಲಯ ಹೇಳಿದೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಬಹಳ ಮುಖ್ಯ. ಹಾಗೆ ಭಾರತದಲ್ಲಿ 10 ಲಕ್ಷ ವೆಂಟಿಲೇಟರ್ ಅಗತ್ಯವಿರುತ್ತದೆ. ಭಾರತದ ಎಲ್ಲಾ ಆಸ್ಪತ್ರೆಗಳು ಮೂರು ತಿಂಗಳು ಶ್ರಮಿಸಬೇಕಾಗುತ್ತದೆ. ಭಾರತವು ಚೀನಾ ಮತ್ತು ಇತರ ದೇಶಗಳಂತೆ ತಾತ್ಕಾಲಿಕ ಆಸ್ಪತ್ರೆಗಳನ್ನು ಸಹ ನಿರ್ಮಿಸಬೇಕು. ಆಸ್ಪತ್ರೆಗಳಿಂದ ಸೋಂಕು ಹರಡುವುದನ್ನು ತಪ್ಪಿಸಬೇಕು. ಭಾರತದಲ್ಲಿ ನಡೆಯುತ್ತಿರುವ ತನಿಖೆಯ ಪ್ರಕ್ರಿಯೆ ಕೂಡ ನಿಧಾನವಾಗಿದೆ ಎಂದು ವಿಶ್ವವಿದ್ಯಾನಿಲಯ ಹೇಳಿದೆ.
