- Advertisement -
- Advertisement -
ಮಂಜೇಶ್ವರ: ಪ್ರಸಿದ್ಧ ಕುಂಬಳೆಯ ಶ್ರೀ ಗೋಪಾಲಕೃಷ್ಣ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಪ್ರತಿವರ್ಷ “ಐತಿಹಾಸಿಕ ಕುಂಬಳೆ ಬೆಡಿ ಮಹೋತ್ಸವ”ವು ಹಮ್ಮಿಕೊಳ್ಳಲಾಗುತ್ತದೆ. ಈ ಬಾರಿಯು ಬೆಡಿ ಮಹೋತ್ಸವಕ್ಕೆ ಕೇರಳದ ಪಾಲಕ್ಕಾಡ್ ಜಿಲ್ಲೆಯ ವಡಕ್ಕಂಚೆರಿ ಅಲತೊಡ್ ನಿಂದ ಸಿಡಿಮದ್ದು ತರಿಸಲಾಗಿದ್ದು, 10 ಲಕ್ಷ ಮೌಲ್ಯದ ಸಿಡಿಮದ್ದನ್ನು ಬೆಡಿ ಮಹೋತ್ಸವಕ್ಕೆ ಬಳಸಲಾಗುತ್ತಿದೆ.
ನಿನ್ನೆ ಬೆಡಿ ತಯಾರಿಕಾ ಸ್ಥಳಕ್ಕೆ ಭೇಟಿ ನೀಡಿದ್ದ ಪಾಲಕ್ಕಾಡ್ ಪೊಲೀಸರು ಕುಂಬಳೆಯ ಬೆಡಿಗೆ ತಯಾರಿಸಿದ್ದ ಸಿಡಿಮದ್ದು ಉತ್ಪನ್ನ ಮತ್ತು ಪಟಾಕಿಗಳ ಹೊರತು ಬೇರೆ ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ ಎಂಬ ಮಾಹಿತಿಯು ಸ್ಥಳೀಯರಿಂದ ಲಭ್ಯವಾಗಿದೆ.
ಈ ಬಾರಿಯ ಐತಿಹಾಸಿಕ ಕುಂಬಳೆ ಬೆಡಿಯು 10 ಲಕ್ಷ ಮೌಲ್ಯದ ಸಿಡಿಮದ್ದಿನೊಂದಿಗೆ ವೈಭವಯುತವಾಗಿ ನಡೆಯಲಿದ್ದು, ಕುಂಬಳೆ ಪೇಟೆ ಸಹಿತ ಸುತ್ತಮುತ್ತಲಿನ ಪರಿಸರವು ಜಾತ್ರೆಯ ಕಳೆಯಲ್ಲಿ ಮಿನುಗುತ್ತಿದೆ.
- Advertisement -