Sunday, June 7, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಕೊಕ್ಕಡದಲ್ಲಿ ಸಂಶಯಾಸ್ಪದವಾಗಿ ಯುವಕ ಸಾವು

ಬೆಳ್ತಂಗಡಿ : ಕೊಕ್ಕಡದಲ್ಲಿ ಸಂಶಯಾಸ್ಪದವಾಗಿ ಯುವಕ ಸಾವು

- Advertisement -
- Advertisement -

ಬೆಳ್ತಂಗಡಿ : ಸಂಶಯಾಸ್ಪದವಾಗಿ ಯುವಕ ಸಾವನ್ನಪ್ಪಿರುವ ಘಟನೆ ಕೊಕ್ಕಡ ಗ್ರಾಮದ ಡೆಂಜ ಸಮೀಪದ ಪೊಯ್ಯಲೆ ಎಂಬಲ್ಲಿ ನಡೆದಿದೆ. ಹರೀಶ್ (35)ಸಂಶಯಾಸ್ಪದ ವಾಗಿ ಮೃತಪಟ್ಟ ಯುವಕ. ಘಟನೆ ಏ.25ರಂದು ಮಧ್ಯಾಹ್ನ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ..

ಮೃತ ಹರೀಶ್(35) ಮತ್ತು ಆತನ ತಂದೆ ಚೋಮ ಎಂಬವರು ಮನೆಯಲ್ಲಿ ಇಬ್ಬರೆ ವಾಸವಾಗಿದ್ದು, ತಾಯಿ ಈ  ಹಿಂದೆ ನಿಧನ ಹೊಂದಿದ್ದರು.

ಹರೀಶ್ ಏ.25ರಂದು ಮಧ್ಯಾಹ್ನ ಮೃತಪಟ್ಟಿದ್ದರು. ತಂದೆ ಚೋಮರವರು ಯಾರನ್ನು ಹತ್ತಿರಕ್ಕೆ ಬಿಡದ ಕಾರಣ ಎ.26 ರಂದು ಮಧ್ಯಾಹ್ನ ವೇಳೆಗೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಮೃತ ದೇಹವನ್ನು ಬೆಳ್ತಂಗಡಿಗೆ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹರೀಶ್ ಅವರ ಸಂಶಯಾಸ್ಪದ ರೀತಿಯಲ್ಲಿ ಸಾವನಪ್ಪಿರುವ ಬಗ್ಗೆ ಧರ್ಮಸ್ಥಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!