Wednesday, April 24, 2024
Homeಕರಾವಳಿಕಾಬೂಲ್‌ನಲ್ಲಿ 27 ಸಿಖ್ಖರ ಹತ್ಯೆ ಮಾಡಿದವರ ತಂಡದಲ್ಲಿ ಕಾಸರಗೋಡಿನ ಉಗ್ರ..!

ಕಾಬೂಲ್‌ನಲ್ಲಿ 27 ಸಿಖ್ಖರ ಹತ್ಯೆ ಮಾಡಿದವರ ತಂಡದಲ್ಲಿ ಕಾಸರಗೋಡಿನ ಉಗ್ರ..!

spot_img
- Advertisement -
- Advertisement -

ಕಾಸರಗೋಡು: ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್‌ನ ಗುರುದ್ವಾರದಲ್ಲಿ 27 ಸಿಖ್ಖರ ಹತ್ಯೆಗೆ ಕಾರಣರಾದ ಉಗ್ರರಲ್ಲಿ ಕಾಸರಗೋಡಿನ ಒಬ್ಬ ವ್ಯಕ್ತಿ ಇದ್ದ ಎಂಬ ಆಘಾತಕಾರಿ ಸಂಗತಿ ಬಯಲಾಗಿದೆ. ಅಬು ಖಾಲಿದ್ ಅಲ್ ಹಿಂದ್ ಎಂಬ ಹೆಸರಿನ ವ್ಯಕ್ತಿ ಇನ್ನಿತರ ಮೂವರೊಂದಿಗೆ ಗುರುದ್ವಾರಕ್ಕೆ ನುಗ್ಗಿದ್ದ. ಆತ ಸೂಸೈಡ್ ಬಾಂಬರ್ ಕೂಡಾ ಆಗಿದ್ದ. ಐಸಿಸ್‌ ಆತನಿಗೆ ಆತ್ಮಾಹುತಿ ದಾಳಿಯ ತರಬೇತಿ ನೀಡಿತ್ತು.

ಮಾರ್ಚ್ 26ರಂದು ಪ್ರಕಟವಾದ ಐಸಿಸ್‌ನ ನಿಯತಕಾಲಿಕೆ ಅಲ್‌ ನಬಾದಲ್ಲಿ ಕೇರಳದ ಉಗ್ರನ ಫೋಟೋ ಕೂಡಾ ಪ್ರಕಟವಾಗಿದೆ. ಎಕೆ 56 ರೈಫಲ್ ಹಿಡಿದಿರುವ ಆತ ತನ್ನ ಬಲಗೈನ ಒಂದು ಬೆರಳನ್ನು ಮೇಲೆ ತೋರಿಸುವಂತೆ ಫೋಟೋ ತೆಗೆದು ಹಾಕಲಾಗಿದೆ. ಮೊಹಮ್ಮದ್ ಸಾಜಿದ್ ಕುಥಿರುಲ್‌ಮಲ್ ಎಂಬ 30 ವರ್ಷದ ಕೇರಳದ ಯುವಕ, ಐಸಿಸ್ ಸೇರಿದ ಬಳಿಕ ಅಬು ಖಾಲಿದ್ ಅಲ್ ಹಿಂದ್ ಎಂದು ಹೆಸರು ಬದಲಾವಣೆ ಮಾಡಿಕೊಂಡಿದ್ದ. ಕೇರಳದ ಅಂಗಡಿಯೊಂದರಲ್ಲಿ ಕೆಲಸಗಾರನಾಗಿದ್ದ ಈತ, 4 ವರ್ಷಗಳ ಹಿಂದೆ 14 ಜನರ ತಂಡದೊಂದಿಗೆ ಕೇರಳದಿಂದ ಪರಾರಿಯಾಗಿ ಐಸಿಸ್‌ ಸೇರಿದ್ದ.

ಕೇರಳ ಜಿಲ್ಲೆ ಕಾಸರಗೋಡಿನ ಪಂಡೆ ಎಂಬ ಪ್ರದೇಶ ಸಾಜಿದ್‌ನ ಹುಟ್ಟೂರು. 2016ರಿಂದಲೇ ಈತ ಎನ್‌ಐಎಗೆ ಬೇಕಿದದ ವ್ಯಕ್ತಿಯಾಗಿದ್ದ. ಇಂಟರ್‌ ಪೋಲ್‌ ಈತನ ಬಂಧನಕ್ಕೆ ರೆಡ್ ನೊಟೀಸ್ ಕೂಡಾ ಹೊರಡಿಸಿತ್ತು. ಜುಲೈ 2016ರಲ್ಲಿ ಅಬ್ದುಲ್ ರಶೀದ್‌ ಎಂಬಾತನ ಪೋಷಕರು ತಮ್ಮ ಮಗ ಕಾಣೆಯಾಗಿದ್ದಾನೆ ಎಂದು ಕಾಸರಗೋಡಿನ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದರು. ಆತನ ಹೆಂಡತಿ ಹಾಗೂ ಮಗು ಕೂಡಾ ನಾಪತ್ತೆಯಾಗಿದ್ದಾರೆ ಎಂದು ದೂರು ದಾಖಲಾಗಿತ್ತು. ಅದೇ ವೇಳೆಗೆ ಕಾಸರಗೋಡು ಸುತ್ತಮುತ್ತ ಒಟ್ಟು 14 ಮಂದಿ ನಾಪತ್ತೆಯಾಗಿದ್ದಾರೆ ಎಂಬ ದೂರುಗಳು ದಾಖಲಾಗಿದ್ದವು. ಈ ಘಟನೆಯ ತನಿಖೆ ವೇಳೆ ನಾಪತ್ತೆಯಾದವರೆಲ್ಲರೂ ಭಾರತವನ್ನು ತೊರೆದು ಐಸಿಸ್ ಸೇರಿದ್ದಾರೆ ಎಂದು ತಿಳಿದುಬಂದಿತ್ತು. ಆ 14 ಮಂದಿಯ ತಂಡದಲ್ಲಿ ಸಾಜಿದ್ ಕೂಡಾ ಇದ್ದ.

- Advertisement -
spot_img

Latest News

error: Content is protected !!