- Advertisement -
- Advertisement -
ಚಿಕ್ಕಮಗಳೂರು : ಪಕ್ಕದ ಮನೆ ನಾಯಿ ಬೊಗಳಿದ್ದಕ್ಕೆ ನಾಯಿಯ ಮಾಲಿಕನ ಮೇಲೆ ಆಸಿಡ್ ದಾಳಿ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನಲ್ಲಿ ನಡೆದಿದೆ.
ಸಾಕಿದ ನಾಯಿ ಬೊಗಳಿದ್ದಕ್ಕೆ ಯಜಮಾನ ಸುಂದರನು ನಾಯಿಗೆ ಬೈಯುತ್ತಿದ್ದ ಸಂಧರ್ಭದಲ್ಲಿ, ಪಕ್ಕದ ಮನೆಯ ಜೇಮ್ಸ್, ನಾಯಿಯ ಹೆಸರಿನಲ್ಲಿ ತನಗೆ ಬೈಯುತ್ತಿದ್ದಾರೆ ಎಂದು ಸುಂದರ್ ರಾಜ್ ಎಂಬುವರ ಮೇಲೆ ಆಸಿಡ್ ದಾಳಿ ನಡೆಸಿದ್ದಾರೆ.
ಆಸಿಡ್ ದಾಳಿಗೊಳಗಾದ ಬಳಿಕ ಸುಂದರರಾಜ್ ಪರಿಸ್ಥಿತಿ ಗಂಭೀರವಾಗಿದ್ದು, ಎಡಗಣ್ಣಿಗೆ ಗಂಭೀರ ಗಾಯ, ಕಣ್ಣಿನ ಪದರ ಬದಲಿಸುವಂತೆ ವೈದ್ಯರು ಸೂಚನೆ ನೀಡಿದ್ದಾರೆ.
ಗಾಯಾಳು ಸುಂದರ್ ರಾಜ್ ಶಿವಮೊಗ್ಗದ ಮೆಗ್ಹಾನ್ ಆಸ್ಪತ್ರೆಗೆ ದಾಖಲಾಗಿದ್ದು, ಜೇಮ್ಸ್ ವಿರುದ್ಧ ಎನ್.ಆರ್. ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -