Sunday, June 21, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಸರಕಾರಿ ಆಸ್ಪತ್ರೆಯ ಚಂದ್ರಶೇಖರ್ ಕಾಮಕಾಂಡ ಪ್ರಕರಣ ಮತ್ತಷ್ಟು ಬೆಳಕಿಗೆ

ಬೆಳ್ತಂಗಡಿ : ಸರಕಾರಿ ಆಸ್ಪತ್ರೆಯ ಚಂದ್ರಶೇಖರ್ ಕಾಮಕಾಂಡ ಪ್ರಕರಣ ಮತ್ತಷ್ಟು ಬೆಳಕಿಗೆ

- Advertisement -
- Advertisement -

ಬೆಳ್ತಂಗಡಿ : ಲೈಂಗಿಕ ಕಿರುಕುಳ ನೀಡಿರುವ ಬೆಳ್ತಂಗಡಿ ಸಾರ್ವಜನಿಕ ಸರಕಾರಿ ಆಸ್ಪತ್ರೆಯ ಔಷಧಿ ವಿಭಾಗದ ಮುಖ್ಯಸ್ಥ ಕಾಮುಕ ಚಂದ್ರಶೇಖರ್ ವಿರುದ್ಧ ಪ್ರಕರಣ ದಾಖಲಾದ ಬಳಿಕ ಆತನ ಮತ್ತಷ್ಟು ಕಾಮಕಾಂಡ ಬೆಳಕಿಗೆ ಬರುತ್ತಿದೆ. ಈ ಬಗ್ಗೆ ಆಂತರಿಕ ತನಿಖೆ ವೇಳೆ ಆಸ್ಪತ್ರೆಯ ಮಹಿಳಾ ಸಿಬ್ಬಂದಿಕಾಮುಕನ ವಿರುದ್ಧ ಹೇಳಿಕೆಗಳನ್ನು ನೀಡಿದ್ದು ಈ ಆಂತರಿಕ ವರದಿ ಇದೀಗ ಬೆಂಗಳೂರು ನಿರ್ದೇಶಕರ ಟೇಬಲ್ ತಲುಪಿದೆ.

ಅಂತರಿಕ ದೂರು ಸಮಿತಿ ವರದಿ ಸಲ್ಲಿಕೆ: ಲೈಂಗಿಕ ಕಿರುಕುಳ ಪ್ರಕರಣ ದಾಖಲಾದ ಬಳಿಕ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಧಿಕಾರಿ ತನಿಖೆ ಮಾಡಲು ಸೂಚನೆ ನೀಡಿದ ಬೆನ್ನಲ್ಲೇ ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಅಂತರಿಕ ದೂರು ಸಮಿತಿಯ ಅಧ್ಯಕ್ಷೆ ಡಾಕ್ಟರ್‌ ತಾರಾಕೇಶ್ವರಿ.ವಿ.ಶೆಟ್ಟಿ ಆಸ್ಪತ್ರೆಯ ಹಲವು ಮಹಿಳಾ ಸಿಬ್ಬಂದಿ ವಿಡಿಯೋ ಚಿತ್ರೀಕರಣ ಮೂಲಕ ಹೇಳಿಕೆಗಳನ್ನು ದಾಖಲು ಮಾಡಿಕೊಂಡಿದ್ದಾರೆ. ಈ ವೇಳೆ ಕೆಲ ನೊಂದ ಮಹಿಳಾ ಸಿಬ್ಬಂದಿ ಕಾಮುಕ ಚಂದ್ರಶೇಖರ್ ನೀಡಿದ ಲೈಂಗಿಕ ಕಿರುಕುಳದ ಬಗ್ಗೆ ಹೇಳಿಕೆಗಳನ್ನು ನೀಡಿದ್ದಾರೆ‌ ಎಂಬ ಸ್ಛೋಟಕ ಮಾಹಿತಿ ಲಭ್ಯವಾಗಿದೆ. ಈ ವರದಿಯನ್ನು ಜಿಲ್ಲಾ ಆರೋಗ್ಯಧಿಕಾರಿಗೆ ಜೂ‌.18 ರಂದು ರಾತ್ರಿ ಕಳುಹಿಸಿಕೊಟ್ಟಿದ್ದು. ಇದನ್ನೆಲ್ಲ ಮುಂದಿನ ಕಾನೂನು ಕ್ರಮಕ್ಕಾಗಿ ಬೆಂಗಳೂರು ಆರೋಗ್ಯ ನಿರ್ದೇಶಕರಾದ ಡಾ.ರಜಿನಿ ಅವರಿಗೆ ಜೂ‌.19 ರಂದು ಕಳುಹಿಸಿಕೊಡಲಾಗಿದೆ ಎಂದು ದ.ಕ.ಜಿಲ್ಲಾ ಆರೋಗ್ಯಧಿಕಾರಿ ಡಾ.ತಿಮ್ಮಯ್ಯ ಅವರು ಮಹಾಎಕ್ಸ್ ಪ್ರೆಸ್ ವೆಬ್ ಸೈಟ್ ಗೆ ಮಾಹಿತಿ ನೀಡಿದ್ದಾರೆ.

ಪ್ರಕರಣದ ವಿವರ: ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ವರ್ಗಾವಣೆ ಮಾಡಿಕೊಳ್ಳದೆ ಕಳೆದ 25 ವರ್ಷಗಳಿಂದ ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಬೀಡುಬಿಟ್ಟಿದ್ದ ಔಷಧಿ ವಿಭಾಗದ ಮುಖ್ಯಸ್ಥ ಹಾಗೂ ಬೆಳ್ತಂಗಡಿ ತಾಲೂಕು ಸರಕಾರಿ ನೌಕರರ ಸಂಘದ ಉಪಾಧ್ಯಕ್ಷನಾಗಿರುವ ಮೂಲತಃ ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ ಕೆದ್ದು ನಿವಾಸಿಯಾಗಿರುವ ಚಂದ್ರಶೇಖರ್ ತನ್ನ ಆಸ್ಪತ್ರೆಯ ಮಹಿಳಾ ಸಿಬ್ಬಂದಿಗೆ ಔಷಧಾಲಯದ ಉಗ್ರಾಣದಲ್ಲಿ ಲೈಂಗಿಕ ಕಿರುಕುಳ ಕೊಟ್ಟಿದ್ದು, ಈ ಬಗ್ಗೆ ಯಾರಲ್ಲದ್ದರೂ ಹೇಳಿದ್ರೆ ಕೆಲಸದಿಂದ ತೆಗೆಯುವುದಾಗಿ ಪದೇ ಪದೇ ಬೆದರಿಕೆ ಹಾಕಿರುವ ಪ್ರಕರಣ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಜೂ‌.11 ರಂದು BNS-2023(u/s-75(3),79,351(2)) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ನ್ಯಾಯಾಲಯದಲ್ಲಿ ಹೇಳಿಕೆ ದಾಖಲು: ಲೈಂಗಿಕ ಕಿರುಕುಳ ಪ್ರಕರಣದ ಸಂತ್ರಸ್ತೆಯನ್ನು ಜೂ.13 ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಪೊಲೀಸರು ಕರೆದುಕೊಂಡು ಹೋಗಿ ನ್ಯಾಯಾಧೀಶರ ಮುಂದೆ ಘಟನೆಯ ಬಗ್ಗೆ ಬಿ.ಎನ್.ಎಸ್ 183 ಹೇಳಿಕೆ ದಾಖಲು ಮಾಡಿಸಿದ್ದಾರೆ.

ಆರೋಪಿ ಮುಖ್ಯಸ್ಥ ಪರಾರಿ: ಕಾಮುಕ ಚಂದ್ರಶೇಖರ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಜೂ‌.11 ರಂದು ಪ್ರಕರಣ ದಾಖಲಾದ ಬಳಿಕ ಬಂಧನದ ಭೀತಿಯಿಂದ ಮೊಬೈಲ್‌ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ‌. ಅದಲ್ಲದೆ ಮಂಗಳೂರು ನ್ಯಾಯಾಲಯದಲ್ಲಿ ಜೂ‌.12 ರಂದು ಜಾಮೀನು ಅರ್ಜಿ ಸಲ್ಲಿಸಿದ್ದು ಆದ್ರೆ ಈವರೆಗೂ ಜಾಮೀನು ಮಂಜೂರುಗೊಂಡಿಲ್ಲ. ಪ್ರಕರಣದ ಸಂಬಂಧ ವಿಚಾರಣೆಗೆ ಹಾಜರಾಗಲು ಬೆಳ್ತಂಗಡಿ ಪೊಲೀಸರು ನೋಟಿಸ್ ಜೊತೆ ಮನೆಗೆ ಹೋದ್ರೆ ಮನೆಗೆ ಬೀಗ ಬಿದ್ದಿತ್ತು. ಆಸ್ಪತ್ರೆಗೆ ಕರ್ತವ್ಯಕ್ಕೆ ಹಾಜರಾಗದೆ ರಜೆ ಮಾಡಿರುವ ಕಾರಣದಿಂದ ಎ.ಎಂ.ಒ ಡಾ.ರಮೇಶ್ ನೋಟಿಸ್ ಜಾರಿ ಮಾಡಿದ್ದು ಈವರೆಗೂ ಚಂದ್ರಶೇಖರ್ ಉತ್ತರ ನೀಡಲ್ಲ‌‌ ಎಂಬ ಮಾಹಿತಿ ಲಭ್ಯವಾಗಿದೆ.

ದೂರು ವಾಪಸ್ ಗೆ ಪ್ರಯತ್ನ: ಕಾಮುಕ ಚಂದ್ರಶೇಖರ್ ವಿರುದ್ಧ ಪ್ರಕರಣ ದಾಖಲಾದ ಬಳಿಕ ಆಪ್ತ ಸರಕಾರಿ ಸಹೋದ್ಯೋಗಿಗಳು, ಕೆಲ ಗಣ್ಯ ವ್ಯಕ್ತಿಗಳು ಸೇರಿಕೊಂಡು ಸಂತ್ರಸ್ತೆಯ ಕುಟುಂಬದವರನ್ನು ಸಂಪರ್ಕಿಸಿ ದಾಖಲಾಗಿರುವ ಪ್ರಕರಣವನ್ನು ಹಣದ ಆಮಿಷ ನೀಡಿ ದೂರು ವಾಪಸ್ ಪಡೆಯಲು ನಾನಾ ರೀತಿಯಲ್ಲಿ ಚಂದ್ರಶೇಖರ್ ಪರವಾಗಿ ಸರ್ಕಸ್ ನಡೆಸಿದ್ರೂ ಸಂತ್ರಸ್ತೆ  ಹಾಗೂ ಕುಟುಂಬದವರು ಇದಕ್ಕೆ ಕ್ಯಾರೆ ಮಾಡದೆ ಕಾನೂನು ಹೋರಾಟ ಮುಂದುವರಿಸಿದ್ದಾರೆ.

ಸಂತ್ರಸ್ತೆಯ ಬಗ್ಗೆ ಅಪಪ್ರಚಾರ:  ಪ್ರಕರಣ ದಾಖಲಾದ ಬಳಿಕ ತನ್ನ ಮಾರ್ಯಾದೆ ಮುಂದಕ್ಕೆ ಸಮಾಜದಲ್ಲಿ ಹೋಗಬಾರದೆಂದು ಕಾಮುಕ ಚಂದ್ರಶೇಖರ್ ಸಂತ್ರಸ್ತ ಮಹಿಳೆಯ ವಿರುದ್ಧವೇ ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾನೆ.

- Advertisement -

Latest News

error: Content is protected !!