- Advertisement -
![]()
- Advertisement -
ಕಾರ್ಕಳ: ಮಿಯ್ಯಾರು ಜೋಡುಕಟ್ಟೆಯಲ್ಲಿ ಜೂ.19, ಶುಕ್ರವಾರದಂದು ಬೆಳಿಗ್ಗೆ ಖಾಸಗಿ ಬಸ್ ಮತ್ತು ರಿಕ್ಷಾ ಡಿಕ್ಕಿಯಾದ ಘಟನೆ ನಡೆದಿದೆ.
ಗಾಯಾಳು ರಿಕ್ಷಾ ಚಾಲಕ ಚಂದ್ರಕಾಂತ್ ಶೆಣೈ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆ ದಾಖಲಿಸಲಾಗಿದೆ.
ಬಜಗೋಳಿಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಬಸ್ ಹಾಗೂ ಅದೇ ರಸ್ತೆಯಲ್ಲಿ ಮುಂಭಾಗದಲ್ಲಿ ಬರುತ್ತಿದ್ದ ರಿಕ್ಷಾ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಪರಿಣಾಮವಾಗಿ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಬಸ್‌ನ ಮುಂಭಾಗ ಜಖಂಗೊಂಡಿರುತ್ತದೆ.
ಇನ್ನು ಈ ಘಟನೆಗೆ ಮೂಲ ಕಾರಣ ಅವೈಜ್ಞಾನಿಕ ರಸ್ತೆ ತಿರುವು ಎಂದು ಸ್ಥಳೀಯರು ದೂರುತ್ತಿದ್ದಾರೆ.
- Advertisement -


