Friday, August 28, 2026
Homeಕರಾವಳಿಮಂಗಳೂರುಬೆಳ್ತಂಗಡಿ : ತಿಮರೋಡಿ ಗಡಿಪಾರು ಆದೇಶದ ವಿರುದ್ಧ ಸಲ್ಲಿಸಿದ್ದ ಅರ್ಜಿ ಸುಪ್ರೀಂ ಕೋರ್ಟ್ ನಲ್ಲೂ ತಿರಸ್ಕಾರ

ಬೆಳ್ತಂಗಡಿ : ತಿಮರೋಡಿ ಗಡಿಪಾರು ಆದೇಶದ ವಿರುದ್ಧ ಸಲ್ಲಿಸಿದ್ದ ಅರ್ಜಿ ಸುಪ್ರೀಂ ಕೋರ್ಟ್ ನಲ್ಲೂ ತಿರಸ್ಕಾರ

- Advertisement -
- Advertisement -

ಬೆಳ್ತಂಗಡಿ : ಅಪರಾಧ ಹಿನ್ನಲೆವುಳ್ಳ ಕಾರಣಕ್ಕೆ ಮತ್ತು ನಿರಂತರವಾಗಿ ಸಮಾಜದ ಸ್ವಾಸ್ಥ ಕೆಡಿಸಿದ ಕಾರಣಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಶಿಕ್ಷೆಗೆ ಒಳಗಾಗಿರುವ ಮಹೇಶ್ ಶೆಟ್ಟಿ ತಿಮರೋಡಿಯ ಗಡಿಪಾರು ಆದೇಶ ಶಿಕ್ಷೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿ ಅರ್ಜಿಯನ್ನು ಜು.13 ರಂದು ತಿರಸ್ಕಾರ ಮಾಡಿದೆ.

ಮಹೇಶ್ ತಿಮರೋಡಿ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿದ ಅರ್ಜಿಯನ್ನು ಯಾವುದೇ ಕಾರಣಕ್ಕೆ ಮಾನ್ಯ ಮಾಡಲು ನಿರಾಕರಿಸಿದ ಸುಪ್ರೀಂ ಕೋರ್ಟ್ ತನ್ನ ಕೋರ್ಟ್ ನಲ್ಲಿ ‘Gamble’ ಮಾಡಲು ತಾನು ಬಿಡುವುದಿಲ್ಲ ಎಂದಿದೆ. ಕರ್ನಾಟಕ ಹೈ ಕೋರ್ಟ್ ಕೂಡಾ ಈ ಹಿಂದೆ ಗಡಿಪಾರಿಗೆ ತಡೆ ನೀಡಲು ನಿರಾಕರಿಸಿತ್ತು.

ಮತ್ತೊಂದೆಡೆ ತಾನು ಸೌಜನ್ಯ ಪ್ರಕರಣದ ಹೋರಾಟಗಾರ ಎಂದು ಹೇಳಿಕೊಂಡಾಗ ಪ್ರಕರಣಗಳನ್ನು ಸೂಕ್ಷ್ಮಗೊಳಿಸುವುದು ಬಿಟ್ಟು ಕಾನೂನನ್ನು ಪಾಲಿಸುವಂತೆ ಸುಪ್ರೀಂ ಕೋರ್ಟ್ ಹೇಳಿದೆ.

- Advertisement -

Latest News

error: Content is protected !!