Friday, June 5, 2026
Homeತಾಜಾ ಸುದ್ದಿಮದುವೆಯಾದ 3 ವರ್ಷಗಳಲ್ಲಿ 18 ಬಾರಿ ಮನೆ ಬದಲಾಯಿಸಿದ ದಂಪತಿ: ಕಾರಣ ಏನು ಅಂಥಾ...

ಮದುವೆಯಾದ 3 ವರ್ಷಗಳಲ್ಲಿ 18 ಬಾರಿ ಮನೆ ಬದಲಾಯಿಸಿದ ದಂಪತಿ: ಕಾರಣ ಏನು ಅಂಥಾ ಗೊತ್ತಾದ್ರೆ ನೀವು ಮೂಗಿನ ಮೇಲೆ ಬೆರಳಿಡ್ತೀರಾ…

- Advertisement -
- Advertisement -

ನವದೆಹಲಿ: ಭೋಪಾಲ್‌ನ ದಂಪತಿ ಮದುವೆಯಾದ 3 ವರ್ಷಗಳಲ್ಲಿ ಬರೋಬ್ಬರಿ 18 ಬಾರಿ ಮನೆ ಛೇಂಜ್ ಮಾಡಿದ್ದಾರೆ.ಯಾಕೆ ಅಂತಾ ಗೊತ್ತಾದ್ರೆ ನೀವು ಮೂಗಿನ ಮೇಲಿನ ಬೆರಳಿಡೋದು ಪಕ್ಕಾ…

ಹೌದು.. ಮನೆಯಲ್ಲಿ ಜಿರಳೆ ಇದೆ ಅನ್ನೋ ಕಾರಣಕ್ಕೆ 18 ಬಾರಿ ಮನೆ ಬದಲಾಯಿಸಿದ್ದಾರೆ. ಹೆಂಡ್ತಿಗೆ ಜಿರಳೆ ಅಂದ್ರೆ ಭಯ ಅನ್ನೋ ಕಾರಣಕ್ಕೆ ಮನೆ ಬದಲಾಯಿಸಿದ್ದಾರೆ. ವೃತ್ತಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಪತಿ, ಪತ್ನಿಯ ಈ ವರ್ತನೆಯಿಂದ ಸ್ನೇಹಿತರು ಮತ್ತು ಕುಟುಂಬದವರಲ್ಲಿ ಮುಜುಗರಕ್ಕೊಳಗಾಗುವುದರಿಂದ ಬೇಸತ್ತಿದ್ದು ಡೈವೋರ್ಸ್‌ ಅರ್ಜಿ ಸಲ್ಲಿಸಲು ಯೋಜಿಸುತ್ತಿದ್ದಾರೆ ಅಂತಾ ಹೇಳಲಾಗಿದೆ,

ದಂಪತಿ 2018 ರಲ್ಲಿ ಮೊದಲ ಬಾರಿಗೆ ಮನೆಗಳನ್ನು ಬದಲಾಯಿಸಿದರು ಆದರೆ ದುರದೃಷ್ಟವಶಾತ್ ಆಗಿನಿಂದ ಜಿರಳೆ ಕಾಟ ನಿಂತಿಲ್ಲ ಎನ್ನಲಾಗಿದೆ. ಅಂದಿನಿಂದ ದಂಪತಿ 18 ಮನೆಗಳನ್ನು ಬದಲಾಯಿಸಿದ್ದಾರೆ ಎನ್ನಲಾಗಿದೆ.

ಚಿಕಿತ್ಸೆಗಾಗಿ ಏಮ್ಸ್ ನಲ್ಲಿ ಒಬ್ಬರು ಸೇರಿದಂತೆ ಅನೇಕ ಖಾಸಗಿ ಮನೋವೈದ್ಯರ ಬಳಿಗೆ ತನ್ನ ಹೆಂಡತಿಯನ್ನು ಕರೆದೊಯ್ದಿದ್ದೇನೆ ಎಂದು ವ್ಯಕ್ತಿಯು ಹೇಳಿಕೊಂಡಿದ್ದಾನೆ ಆದರೆ ಸೂಚಿಸಿದ ಯಾವುದೇ ಔಷಧಿಗಳನ್ನು ತೆಗೆದುಕೊಳ್ಳಲು ಅವಳು ನಿರಾಕರಿಸಿದ್ದಾಳೆ. ಮತ್ತೊಂದೆಡೆ ಹೆಂಡತಿ ತನ್ನ ಪತಿಗೆ ತನ್ನ ಸಮಸ್ಯೆ ಅರ್ಥವಾಗುತ್ತಿಲ್ಲ ಮತ್ತು ಔಷಧಿಗಳನ್ನು ಕೊಡುವುದರ ಮೂಲಕ ಮಾನಸಿಕ ಅಸ್ವಸ್ಥ ಎಂದು ಘೋಷಿಸಲು ಪ್ರಯತ್ನಿಸುತ್ತಿದ್ದಾಳೆ ಎಂದು ಆರೋಪಿಸುತ್ತಿದ್ದಾಳೆ ಅಂತಾ ಗಂಡ ಹೇಳಿದ್ದಾನೆ.

- Advertisement -

Latest News

error: Content is protected !!