Wednesday, June 3, 2026
Homeಉತ್ತರ ಕನ್ನಡಶಾಲಾ ವಿದ್ಯಾರ್ಥಿ ಮೇಲೆ ಕರಡಿ ದಾಳಿ

ಶಾಲಾ ವಿದ್ಯಾರ್ಥಿ ಮೇಲೆ ಕರಡಿ ದಾಳಿ

- Advertisement -
- Advertisement -

ಕಾರವಾರ: ಶಾಲಾ ವಿದ್ಯಾರ್ಥಿ ಮೇಲೆ ಕರಡಿ ದಾಳಿ ನಡೆಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಹಳಿಯಾಳ ತಾಲೂಕಿನ ಅಜಗಾಂವ ಗ್ರಾಮದ ಬಳಿ ಘಟನೆ‌ ನಡೆದಿದೆ.

ಶಾಲೆ ಮುಗಿಸಿ ಬಾಲಕ ತಮ್ಮ ಹೊಲದ ಬಳಿ ಬರುತ್ತಿದ್ದಾಗ ಬಾಲಕನ ಮೇಲೆ ಕರಡಿ ದಿಢೀರ್ ದಾಳಿ ನಡೆಸಿದೆ.

ಬಾಲಕನ ಎಡಗಾಲಿಗೆ ಕರಡಿ ಕಚ್ಚಿರುವುದರಿಂದ ತೀವ್ರ ಗಾಯವಾಗಿದೆ. ಕರಡಿ ದಾಳಿ ನಡೆಸುತ್ತಿದ್ದಂತೆ ಬಾಲಕನ ಕೂಗಾಟ ಕೇಳಿ ಅಕ್ಕ ಪಕ್ಕದ ಜನ ಓಡಿ ಬಂದಿದ್ದಾರೆ.

ಸ್ಥಳೀಯರು ಬಾಲಕನ ರಕ್ಷಣೆ ಮಾಡಿ ಸಮೀಪದ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!