Saturday, June 6, 2026
Homeತಾಜಾ ಸುದ್ದಿಇನ್ ಸ್ಟಾಗ್ರಾಮ್ ಸ್ಟೋರಿಯಲ್ಲಿ sorry ಅಂತ ಬರೆದು ವಿದ್ಯಾರ್ಥಿ ಆತ್ಮಹತ್ಯೆ

ಇನ್ ಸ್ಟಾಗ್ರಾಮ್ ಸ್ಟೋರಿಯಲ್ಲಿ sorry ಅಂತ ಬರೆದು ವಿದ್ಯಾರ್ಥಿ ಆತ್ಮಹತ್ಯೆ

- Advertisement -
- Advertisement -

ಬೆಂಗಳೂರು:   ಸಾಮಾಜಿಕ ಜಾಲತಾಣ ಇನ್ ಸ್ಟಾ  ದಲ್ಲಿ ಬಿಕಾಂ ಓದುತ್ತಿರುವ ವಿದ್ಯಾರ್ಥಿಯೊಬ್ಬ Sorry ಎಂದು ಬರೆದು ಆತ್ಮಹತ್ಯೆಗೆ ಶರಣಾದ ಘಟನೆ ನಾಗದೇನಹಳ್ಳಿಯಲ್ಲಿ ನಡೆದಿದೆ. 

ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಯನ್ನು ಮನೋಜ್(19)ಎಂದು ಗುರುತಿಸಲಾಗಿದೆ.  ಮಂಡ್ಯ ಮೂಲದವನಾಗಿರುವ ಈತ ಖಾಸಗಿ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದ. ಅಜ್ಜಿ ಮನೆಯಲ್ಲಿ ಇದ್ದುಕೊಂಡು ಕಾಲೇಜ್‍ಗೆ ಹೋಗುತ್ತಿದ್ದ. ಆದರೆ ಕೆಲ ದಿನಗಳಿಂದ ಕಾಲೇಜ್‍ಗೆ ಹೋಗದೆ ಒಬ್ಬನೇ ಇರುತ್ತಿದ್ದು, ಕಳೆದ ಒಂದು ವಾರದಿಂದ ವಾಟ್ಸಪ್ ಸ್ಟೇಟಸ್‍ನಲ್ಲಿ ಸ್ಯಾಡ್ ಸ್ಟೋರಿ ಟೆಕ್ಸ್ಟ್ ಹಾಕಿಕೊಳ್ತಿದ್ದನಂತೆ. ಮನೆಯವರು ಸ್ನೇಹಿತರು ಇದ್ಯಾವುದನ್ನು ಗಂಭೀರವಾಗಿ ತಗೊಂಡಿಲ್ಲ.  ಆದರೆ ಬುಧವಾರದಂದು ರಾತ್ರಿ ತನ್ನ ಇನ್ಸ್ಟಾಗ್ರಾಂನಲ್ಲಿ ಸಾರಿ ಅಂತಾ ಬರೆದುಕೊಂಡು ನೇಣಿಗೆ ಶರಣಾಗಿದ್ದಾನೆ.

ಸದ್ಯ ಮನೋಜ್ ಸಾವಿನ ಸುತ್ತಲೂ ನೂರೆಂಟು ಅನುಮಾನಗಳು ಮೂಡುತ್ತಿದೆ. ಮನೋಜ್ ಮನೆಯಲ್ಲಷ್ಟೇ ಅಲ್ಲ, ಕಾಲೇಜಿನಲ್ಲೂ ಒಳ್ಳೆ ವಿದ್ಯಾರ್ಥಿ ಎನಿಸಿಕೊಂಡಿದ್ದ. ಚೆನ್ನಾಗಿ ಓದುತ್ತಿದ್ದ ಮನೋಜ್‍ಗೆ ಏಕಾಏಕಿ ಏನಾಯಿತೋ ಏನೋ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮನೋಜ್ ಯಾರೊಂದಿಗಾದರೂ ಪ್ರೀತಿಯಲ್ಲಿ ಬಿದ್ದಿದ್ನಾ..? ಅಥವಾ ಯಾರ ಜೊತೆಗಾದ್ರು ಗಲಾಟೆ ಮಾಡಿಕೊಂಡಿದ್ದನೋ ಅನ್ನೋ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.

- Advertisement -

Latest News

error: Content is protected !!