Sunday, May 5, 2024
Homeತಾಜಾ ಸುದ್ದಿಮದ್ಯಪ್ರಿಯರಿಗೆ ಸಂತಸದ ಸುದ್ದಿ: ಇನ್ನು ಮುಂದೆ ಮನೆ ಬಾಗಿಲಿಗೆ ಬರಲಿದೆ ನಿಮ್ಮಿಷ್ಟವಾದ ಬ್ರಾಂಡ್

ಮದ್ಯಪ್ರಿಯರಿಗೆ ಸಂತಸದ ಸುದ್ದಿ: ಇನ್ನು ಮುಂದೆ ಮನೆ ಬಾಗಿಲಿಗೆ ಬರಲಿದೆ ನಿಮ್ಮಿಷ್ಟವಾದ ಬ್ರಾಂಡ್

spot_img
- Advertisement -
- Advertisement -

ಕೋಲ್ಕತ್ತಾ: ಇತ್ತಿಚಿನ ದಿನಗಳಲ್ಲಿ ಆನ್ ಲೈನ್ ಮಾರಾಟವು ಭಾರೀ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ. ತರಕಾರಿ, ದಿನಸೀ, ಬಟ್ಟೆ ಹೀಗೆ ಎಲ್ಲವೂ ಮನೆಬಾಗಿಲಿಗೆ ಕ್ಷಣಮಾತ್ರದಲ್ಲಿ ಬಂದುಬಿಡುತ್ತದೆ. ಈಗ ಮದ್ಯಪ್ರಿಯರೂ ಕೂಡ ಮನೆಯಲ್ಲಿದ್ದೂ ತಮಗಿಷ್ಟವಾದ ಬ್ರಾಂಡ್ ಅನ್ನು ಖರೀದಿಸಬಹುದಾಗಿದೆ.

ಹೌದು, ಸಂಸ್ಥೆಯೊಂದು ಮನೆ ಬಾಗಿಲಿಗೇ ಮದ್ಯವನ್ನು ತಲುಪಿಸುತ್ತೇವೆ ಎಂದು ಹೇಳುವ ಮೂಲಕ ಮದ್ಯಪ್ರಿಯರಿಗೆ ಸಿಹಿಸುದ್ದಿ ನೀಡಿದೆ. ಆರ್ಡರ್ ಮಾಡಿದ ಕೆಲವೇ ಗಂಟೆಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ವಸ್ತುಗಳು ಮನೆ ಬಾಗಿಲಿಗೆ ಬಂದು ತಲುಪುತ್ತವೆ. ಆದರೆ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಸಂಸ್ಥೆಗಳು ಮದ್ಯಪ್ರಿಯರಿಗೂ ಇಂತಹ ಅವಕಾಶವನ್ನು ನೀಡಿದೆ. 

ಮದ್ಯವನ್ನು ಆರ್ಡರ್ ಮಾಡಿದ 10 ನಿಮಿಷದಲ್ಲೇ ಮನೆ ಬಾಗಿಲಿಗೆ ಬರುತ್ತೆ ಎಂದು ಹೈದರಾಬಾದ್ ಮೂಲದ ಸ್ಟಾರ್ಟ್ ಅಪ್ ಕಂಪನಿ ಹೇಳಿಕೊಂಡಿದೆ. ಬೂಜಿ ಹೆಸರಿನ ಈ ಖಾಸಗಿ ಸಂಸ್ಥೆ ಮದ್ಯವನ್ನು ಆರ್ಡರ್ ಮಾಡಿದ ಕೆಲವೇ ನಿಮಿಷದಲ್ಲೇ ತಲುಪಿಸುತ್ತೇವೆ ಎಂದು ಘೋಷಿಸಿಕೊಂಡಿದೆ.

ಸದ್ಯಕ್ಕೆ ಕೋಲ್ಕತ್ತಾ ನಗರದಲ್ಲಿ ಮಾತ್ರ ಸಂಸ್ಥೆಯು ಈ ಸೇವೆಯನ್ನು ನೀಡಲಿದ್ದು, ನಂತರದ ದಿನಗಳಲ್ಲಿ ಇತರೆ ನಗರಗಳಲ್ಲಿಯೂ ಸೇವೆ ಆರಂಭಿಸಲಾಗುವುದು ಎಂದು ಹೇಳಿದೆ. ಕೆಲವು ಸಂಸ್ಥೆಗಳಲ್ಲಿ ಈಗಾಗಲೇ ಮಾರಾಟ ಮಾಡುತ್ತಿದೆ. ಆದರೆ ನಾವು ಅವರಿಗಿಂತ ವೇಗವಾಗಿ ನಿಮ್ಮ ಮನೆ ಬಾಗಿಲಿಗೆ ನಿಮಗಿಷ್ಟವಾದ ಮದ್ಯವನ್ನು ತಂದುಕೊಡುತ್ತೇವೆ ಎಂದು ತನ್ನ ಗ್ರಾಹಕರಿಗೆ ಈ ಸಂಸ್ಥೆ ಭರವಸೆಯನ್ನು ನೀಡಿದೆ

- Advertisement -
spot_img

Latest News

error: Content is protected !!