Monday, April 29, 2024
Homeಇತರಬಂದಾರು ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ- ಮನೆಮನೆಗಳಲ್ಲಿ ಸಂಸ್ಕಾರ ಕ್ರಮಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಶ್ರೀಶಕುಮಾರ್

ಬಂದಾರು ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ- ಮನೆಮನೆಗಳಲ್ಲಿ ಸಂಸ್ಕಾರ ಕ್ರಮಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಶ್ರೀಶಕುಮಾರ್

spot_img
- Advertisement -
- Advertisement -

ಬಂದಾರು: ಮಸೀದಿಯಲ್ಲಿ ಮತ್ತು ಚರ್ಚ್ ನಲ್ಲಿ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿದ್ದಾರೆ.
ನಮ್ಮಲ್ಲಿ ಸಹ ಎಲೆ ವಯಸ್ಸಿನಲ್ಲಿ ಧಾರ್ಮಿಕ ಕೇಂದ್ರಗಳಲ್ಲಿ ಧಾರ್ಮಿಕ ಶಿಕ್ಷಣ ನೀಡಬೇಕು. ಚಿಕ್ಕವಯಸ್ಸಿನಲ್ಲಿ ಪ್ರತಿಯೊಬ್ಬ ಹೆತ್ತವರು ಸಂಸ್ಕಾರ ಸಂಸ್ಕೃತಿ ಕಲಿಸಿಕೊಡಬೇಕು ಅವಾಗ ಮಕ್ಕಳಲ್ಲಿ ಧಾರ್ಮಿಕ ಭಾವನೆ ಮೂಡುತ್ತದೆ. ಪ್ರತಿ ಮನೆಮನೆಗಳಲ್ಲಿ ಸಂಸ್ಕಾರ ಕ್ರಮಗಳನ್ನು ನಿತ್ಯ ಜೀವನದಲ್ಲಿ ಆಳವಡಿಸಕೊಳ್ಳುವ ಅಗತ್ಯವಿದೆಯೆಂದು. ಪುತ್ತೂರು ವಿವೇಕಾನಂದ ಕಾಲೇಜಿನ ಸಂಸ್ಕೃತ ಉಪನ್ಯಾಸಕರಾದ ಶ್ರೀಶ ಕುಮಾರ್ ಹೇಳಿದರು. ಇವರು ಬಂದಾರು ಗ್ರಾಮದ ಪಾಣೆಕಲ್ಲು ಶಿರಾಡಿ ಸಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ದಲ್ಲಿ ಜ.29ರಂದು ಧಾರ್ಮಿಕ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು ಬಂದಾರು ಗ್ರಾಮ ಒಂದು ಕಾಲದಲ್ಲಿ ಕುಗ್ರಾಮವಾಗಿತ್ತು ಇದೀಗ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗೇ ಆಗಿದೆ. ಇದೀಗ ಗ್ರಾಮ ಒಳ್ಳೆಯ ರೀತಿಯ ಅಭಿವೃದ್ಧಿಯಿಂದ ಬೆಳಗುತಿದೆ. ಇದಕ್ಕೆ ಗ್ರಾಮದ ದೈವ-ದೇವರುಗಳ. ಆಶೀರ್ವಾದ ಇದೆ ಎಂದರು. ಇಲ್ಲಿಯ ಪುನರ್ ಪ್ರತಿಷ್ಠಾ ಕಾರ್ಯಕ್ರಮಗಳು ಬಹಳ ಉತ್ತಮ ರೀತಿಯಲ್ಲಿ ನಡೆಯಲಿ ಇದಕ್ಕೆ ದೇವರ ಆಶೀರ್ವಾದ ಇರಲಿ ಆಶಿಸಿದರು

ಭೂಸೇನೆಯಲ್ಲಿ ನಿವೃತ್ತಿ ಹೊಂದಿದ ಯೋಧ ರಮೇಶ್ ಕೆ ಬಂದಾರು, ಜಾತ್ರೋತ್ಸವ ಸಮಿತಿಯ ಅಧ್ಯಕ್ಷರಾದ ಲಿಂಗಪ್ಪ ಗೌಡ, ಕಾರ್ಯದರ್ಶಿ ಗಣೇಶ್ ಗೌಡ ಪುಯಿಲ ಇವರಿಗೆ ಸನ್ಮಾನ ಕಾರ್ಯಕ್ರಮ ಮಾಡಲಾಯಿತು. ನಂತರ ರಾಜ್ಯ ಪ್ರಶಸ್ತಿ ಪುರಸ್ಕೃತ ದಯಾನಂದ ಕತ್ತಲ್ ಸಾರ್ ರವರ ನಿರೂಪಣೆಯಲ್ಲಿ ಕಲಾಕುಂಭ ಸಾಂಸ್ಕೃತಿಕ ವೇದಿಕೆ ಕುಲಾಯಿ ಇವರಿಂದ ತುಳುನಾಡ ಸಂಸ್ಕೃತಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಜ.30ರಂದು ಪ್ರತಿಷ್ಠಾ ಹೋಮ ಪ್ರತಿಷ್ಠೆ ಕಲಶ ಪ್ರತಿಷ್ಠೆ ನಡೆಯಿತು.

ರಾತ್ರಿ ತುಳುನಾಡ ಗಾನಗಂಧರ್ವ ಸಂಗೀತ ಸೇವಾ ಪ್ರತಿಷ್ಠಾನ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು. ಮತ್ತು ಗಾಯಕಿ ಅಖಿಲಾ ಪಜ್ಜಿಮಣ್ಣು,ಸಮನ್ವಿ ರೈ,ಕಿರಣ್ ಕುಮಾರ್ ಇವರು ಭಾಗವಹಿಸಿದರು.

ಶಿರಾಡಿ ಗ್ರಾಮದೈವ ಪರಿವಾರ ದೈವಸ್ಥಾನ ಇದರ ಅನುವಂಶೀಯ ಆಡಳಿತ ಮೊಕ್ತೇಸರರಾದ ಸೂರ್ಯನಾರಾಯಣ ಕುಡುಮತ್ತಾಯ ಧಾರ್ಮಿಕ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಸಭೆಯ ಸಭಾಧ್ಯಕ್ಷತೆಯನ್ನು ಸಹ ಸಂಯೋಜಕ ಕುಟುಂಬ ಪ್ರಬೋಧನ ಮಂಗಳೂರು ವಿ ಭಾಗದ ಅಚ್ಚುತ್ ನಾಯಕ್ ವಹಿಸಿದರು. ಮುಖ್ಯ ಅತಿಥಿಗಳಾಗಿ ಬಂದಾರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಪರಮೇಶ್ವರಿ.ಕೆ, ಜನಾರ್ಧನ ಗೌಡ, ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಕೃಷ್ಣಕಾಂತ್ ಅಯ್ಯಪ್ಪ ಪಾಟೀಲ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ . ಗುರುವಾಯನಕೆರೆ ಇದರ ಯೋಜನಾಧಿಕಾರಿ ಯಶವಂತ್, ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಅಧ್ಯಕ್ಷರಾದ ಧರ್ಮಪ್ಪ ಗೌಡ ಬಾನಡ್ಕ, ಪದ್ಮುಂಜ ಪ್ರಾಥಮಿಕ ‌ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ, ಮಲೆಂಗಲ್ಲು‌ ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ರಾದ ಚಿದಾನಂದ ರಾವ್, ಬೈಪಾಡಿ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕುಕ್ಕಪ್ಪ ಗೌಡ, ಮುಗೇರಡ್ಕ ಮೂವರು ದೈವಗಳ ದೈವಸ್ಥಾನದ ಆಡಳಿತ ಮೊಕ್ತೇಸರ ರಾದ ಮನೋಹರ ಗೌಡ ಅಂತರ, ತಾಲೂಕು ವಾಲಿಬಾಲ್ ಅಸೋಸಿಯೇಷನ್ ನ ಅಧ್ಯಕ್ಷ ಯಶವಂತ ಗೌಡ, ಪೆಲತ್ತಿಮಾರು ಶ್ರೀವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷರಾದ ಜಗದೀಶ್ ಗೌಡ ಕೊಂಬೇಡಿ, ಜಾತ್ರೋತ್ಸವ ಸಮಿತಿಯ ಅಧ್ಯಕ್ಷರಾದ ಲಿಂಗಪ್ಪ ಗೌಡ, ಬಂದಾರು ಹಾ.ಉ.ಮಹಿಳಾ ಸಂಘದ ಅಧ್ಯಕ್ಷರಾದ ಮಮತಾ ಲೋಕೇಶ್ ಗೌಡ, ಗುತ್ತು ಮನೆಯ ದಿನೇಶ್ ಗೌಡ, ಜಯಪ್ರಕಾಶ್ ಬಾರಿಕೆ, ಮುಂತಾದವರು ಉಪಸ್ಥಿತರಿದ್ದರು.

ಬ್ರಹ್ಮಕಲಶೋತ್ಸವ ಸಮಿತಿಯ ಕೋಶಾಧಿಕಾರಿ ಉದಯಕುಮಾರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸನ್ಮಾನ ಪತ್ರವನ್ನು ಸಂದೇಶ್ ಬಿ ಗೌಡ ವಾಚಿಸಿದರು. ವಿಜಯ್ ನಿರೂಪಿಸಿದರು, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನಕಾರ್ಯದರ್ಶಿ ಚೇತನ್ ಗೌಡ ಪಾಲ್ತಿಮಾರು ಧನ್ಯವಾದವಿತ್ತರು

- Advertisement -
spot_img

Latest News

error: Content is protected !!