Saturday, June 6, 2026
Homeತಾಜಾ ಸುದ್ದಿಬಲೂನ್ ರೂಪದಲ್ಲಿ ಬಂದ ಯಮ : ಹುಟ್ಟುಹಬ್ಬ ಆಚರಣೆಯ ತಯಾರಿಯ ವೇಳೆ ನಡೆದೇ ಹೋಯ್ತು...

ಬಲೂನ್ ರೂಪದಲ್ಲಿ ಬಂದ ಯಮ : ಹುಟ್ಟುಹಬ್ಬ ಆಚರಣೆಯ ತಯಾರಿಯ ವೇಳೆ ನಡೆದೇ ಹೋಯ್ತು ದುರಂತ

- Advertisement -
- Advertisement -

ಬೆಂಗಳೂರು : ಬಲೂನ್ ಗ್ಯಾಸ್ ಸಿಲಿಂಡರ್ ಸಿಡಿದು ಯುವಕನ ದೇಹ ಛಿದ್ರಗೊಂಡ ಭೀಕರ ಘಟನೆ ಬೆಂಗಳೂರಿನ ರಿಚ್ ಮಂಡ್ ಸರ್ಕಲ್ ಬಳಿ ನಡೆದಿದೆ.

ಲ್ಯಾಂಗ್ ಪೋರ್ಡ್ ಹೌಸ್ ಅಪಾರ್ಟ್ ಮೆಂಟ್ ನಲ್ಲಿ ಹುಟ್ಟು ಹಬ್ಬದ ಆಚರಣೆಗೆ ಬಲೂನ್ ಪೂರೈಕೆ ಮಾಡಲು ಬಂದಿದ್ದ ಯುವಕ ಈ ಘಟನೆಯಲ್ಲಿ ದಾರುಣವಾಗಿ ಸಾವನ್ನಪ್ಪಿದ್ದಾನೆ.

ಯುವಕ ಅಪಾರ್ಟ್ ಮೆಂಟ್ ಹೊರಗೆ ಬಲೂನ್ ಗೆ ಗ್ಯಾಸ್ ಫಿಲ್ಲಿಂಗ್ ಮಾಡುತ್ತಿದ್ದಾಗ ಗ್ಯಾಸ್ ಸ್ಪೋಟಗೊಂಡು ಈ ಘಟನೆ ನಡೆದಿದೆ. ಮೃತಪಟ್ಟ ಯುವಕ ತಮಿಳುನಾಡು ಮೂಲದವನಾಗಿದ್ದು, ಬೆಂಗಳೂರಿನಲ್ಲಿ ಕೆಲವು ವರ್ಷಗಳಿಂದ ವಾಸವಿದ್ದನು. ಘಟನೆ ನಡೆದ ಸ್ಥಳಕ್ಕೆ ಅಶೋಕನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಪಾರ್ಟ್​ಮೆಂಟ್​ನ ನಿವಾಸಿಗರು ಕುಟುಂಬ ಸದಸ್ಯರೊಬ್ಬರ ಜನ್ಮದಿನಾಚರಣೆ ಸಲುವಾಗಿ ಮೈಪಾರ್ಟಿ.ಕಾಂ ಮೂಲಕ ಬರ್ತ್​ಡೇ ಅಲಂಕಾರಕ್ಕಾಗಿ ಬಲೂನ್ ಅಳವಡಿಸುವವರನ್ನು ಆಹ್ವಾನಿಸಿದ್ದರು. ಹೀಗಾಗಿ ದಿನೇಶ್​, ತನ್ನೊಂದಿಗೆ ಮಹದೇಶ್​ ಎಂಬಾತನನ್ನು ಕರೆದುಕೊಂಡು ಆ ಅಪಾರ್ಟ್​ಮೆಂಟ್​ಗೆ ತೆರಳಿದ್ದ.

ಅಪಾರ್ಟ್​ಮೆಂಟ್​ನಲ್ಲಿನ ಹೋಂಡಾ ಆಯಕ್ಟಿವಾ ಸ್ಕೂಟರ್ ಮೇಲೆ ಸಿಲಿಂಡರ್ ಇಟ್ಟುಕೊಂಡು ಬಲೂನ್‌ಗೆ ಗ್ಯಾಸ್ ಫಿಲ್ ಮಾಡುತ್ತಿರುವ ವೇಳೆ ಏಕಾಏಕಿ ಸಿಲಿಂಡರ್ ಸ್ಫೋಟಗೊಂಡಿದೆ. ಪರಿಣಾಮ ದಿನೇಶ್ ದೇಹ ಛಿದ್ರವಾಗಿ, ಗಂಭೀರ ಗಾಯಗೊಂಡು ಸಾವಿಗೀಡಾಗಿದ್ದಾರೆ. ಸಹ ಕೆಲಸಗಾರ ಮಹದೇಶ್ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಿನೇಶ್ ಹಾಗೂ ಮಹದೇಶ್ ನಾಲ್ಕು ವರ್ಷಗಳಿಂದ ಮೈ ಪಾರ್ಟಿ ಡಾಟ್‌ಕಾಮ್‌ನಲ್ಲಿ ಕೆಲಸ ಮಾಡುತ್ತಿದ್ದರು.

- Advertisement -

Latest News

error: Content is protected !!