Friday, June 5, 2026
Homeಕರಾವಳಿಮಂಗಳೂರಿನಲ್ಲಿ ಮಹಡಿಯಿಂದ ಬಿದ್ದು ಕಾರ್ಮಿಕ ಸಾವು

ಮಂಗಳೂರಿನಲ್ಲಿ ಮಹಡಿಯಿಂದ ಬಿದ್ದು ಕಾರ್ಮಿಕ ಸಾವು

- Advertisement -
- Advertisement -

ಮಂಗಳೂರು: ಮನೆಯೊಂದಕ್ಕೆ ಪೈಂಟ್ ಬಳಿಯುವಾಗ ಕಾರ್ಮಿಕ ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ನಗರದ ಮಂಗಳಾದೇವಿ ಪಂಪ್ ಬಳಿ ನಡೆದಿದೆ.

ಕೊಲ್ಯ ಕಣೀರುತೋಟ ನಿವಾಸಿ ಆಕಾಶ್ (34) ಮೃತ ಯುವಕ. ಮಂಗಳಾದೇವಿ ಪೆಟ್ರೋಲ್ ಪಂಪ್ ಬಳಿಯ ಮನೆಯೊಂದರ 2ನೇ ಮಹಡಿಯಲ್ಲಿ ಆಕಾಶ್ ಪೈಟಿಂಗ್ ಮಾಡುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!