Monday, June 8, 2026
Homeತಾಜಾ ಸುದ್ದಿಬಕ್ರೀದ್ ಹಬ್ಬದ ಹಿನ್ನೆಲೆ 707 ಜಾನುವಾರುಗಳ ರಕ್ಷಣೆ: ಗೋಹತ್ಯೆ ನಿಷೇಧ ಕಾಯ್ದೆಯಡಿ 67 ಜನರ ಬಂಧನ

ಬಕ್ರೀದ್ ಹಬ್ಬದ ಹಿನ್ನೆಲೆ 707 ಜಾನುವಾರುಗಳ ರಕ್ಷಣೆ: ಗೋಹತ್ಯೆ ನಿಷೇಧ ಕಾಯ್ದೆಯಡಿ 67 ಜನರ ಬಂಧನ

- Advertisement -
- Advertisement -

ಬೆಂಗಳೂರು:ಬಕ್ರೀದ್ ಹಬ್ಬದ ಸಂದರ್ಭದಲ್ಲಿ ರಾಜ್ಯಾದ್ಯಂತ 707 ಜಾನುವಾರುಗಳನ್ನು ರಕ್ಷಣೆ ಮಾಡಲಾಗಿದ್ದು, 67 ಜನರನ್ನು ಬಂಧಿಸಲಾಗಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ಹೇಳಿದ್ದಾರೆ.

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಉಲ್ಲಂಘನೆ ಮಾಡಿದಕ್ಕಾಗಿ 60 FIR ದಾಖಲಿಸಲಾಗಿದೆ. 67 ಜನರನ್ನು ಬಂಧಿಸಲಾಗಿದೆ 707 ಜಾನುವಾರುಗಳನ್ನು ರಕ್ಷಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.

707ರಲ್ಲಿ 551 ಗೋವುಗಳು, 144 ಎಮ್ಮೆ-ಕೋಣ, 12 ಒಂಟೆಗಳನ್ನು ರಕ್ಷಣೆ ಮಾಡಲಾಗಿದೆ.ರಕ್ಷಣೆ ಮಾಡಿದ ಜಾನುವಾರುಗಳನ್ನ ಸ್ಥಳೀಯ ಗೋಶಾಲೆಗಳಿಗೆ ರವಾನೆ ಮಾಡಲಾಗಿದೆ ಎಂದು ಹೇಳಿದ್ದಾರೆ.

- Advertisement -

Latest News

error: Content is protected !!