Sunday, April 28, 2024
Homeಕರಾವಳಿಕಾಸರಗೋಡುಕಾಸರಗೋಡು; ಎದೆ ಹಾಲುಣಿಸುವಾಗ ಹಾಲು ಗಂಟಲಲ್ಲಿ ಸಿಲುಕಿ ಎರಡೂವರೆ ತಿಂಗಳ ಮಗು ಸಾವು

ಕಾಸರಗೋಡು; ಎದೆ ಹಾಲುಣಿಸುವಾಗ ಹಾಲು ಗಂಟಲಲ್ಲಿ ಸಿಲುಕಿ ಎರಡೂವರೆ ತಿಂಗಳ ಮಗು ಸಾವು

spot_img
- Advertisement -
- Advertisement -

ಕಾಸರಗೋಡು; ಎದೆ ಹಾಲುಣಿಸುವಾಗ ಹಾಲು ಗಂಟಲಲ್ಲಿ ಸಿಲುಕಿ ಎರಡೂವರೆ ತಿಂಗಳ ಮಗು ಸಾವನ್ನಪ್ಪಿರುವ ಘಟನೆ ಕಾಸರಗೋಡಿನ ಬಂಬ್ರಾಣದಲ್ಲಿ ನಡೆದಿದೆ.

ಇಲ್ಲಿನ  ಅಬ್ದುಲ್ ಅಝೀಝ್-ಖದೀಜಾ ದಂಪತಿ ಪುತ್ರಿ, ಎರಡೂವರೆ ತಿಂಗಳ ಕಂದಮ್ಮ ಮೃತಪಟ್ಟಿದೆ. ತಾಯಿ ಮಲಗಿಕೊಂಡು ಮಗುವಿಗೆ ಎದೆಹಾಲು ಕುಡಿಸುತ್ತಿದ್ದರು. ಈ ವೇಳೆ ಹಾಲು ಕುಡಿಯುತ್ತಿದ್ದ ಮಗು ಎಷ್ಟು ಹೊತ್ತಾದರೂ ಎಚ್ಚರಗೊಳ್ಳದೆ ಇದ್ದಾಗ ಕುಂಬಳೆಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅದಾಗಲೇ ಮಗು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು. ಕುಂಬಳೆ ಪೊಲೀಸರು ಮಹಜರು ನಡೆಸಿದರು.

- Advertisement -
spot_img

Latest News

error: Content is protected !!