Thursday, June 4, 2026
Homeಕರಾವಳಿಮಂಗಳೂರು : ನಟೋರಿಯಸ್ ರೌಡಿ ಆಕಾಶ್ ಭವನ ಶರಣ್ ಮೇಲೆ ಫೈರಿಂಗ್

ಮಂಗಳೂರು : ನಟೋರಿಯಸ್ ರೌಡಿ ಆಕಾಶ್ ಭವನ ಶರಣ್ ಮೇಲೆ ಫೈರಿಂಗ್

- Advertisement -
- Advertisement -

ಮಂಗಳೂರು : ನಟೋರಿಯಸ್ ರೌಡಿಶೀಟರ್ ಆಕಾಶ್ ಭವನ ಶರಣ್ ಮೇಲೆ ಮಂಗಳೂರು ಸಿಸಿಬಿ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.

ಮಂಗಳೂರು ಸೇರಿದಂತೆ ಹಲವು ಕಡೆ ಕೊಲೆ, ಕೊಲೆ ಯತ್ನ ,ಪೋಕ್ಸೋ ಪ್ರಕರಣ ಸೇರಿದಂತೆ 21 ಪ್ರಕರಣ ದಾಖಲಾಗಿದೆ.

ಪ್ರಕರಣ ಸಂಬಂಧ ವಾರೆಂಟ್ ಮತ್ತು ಸುಳ್ಯ ಕೆವಿಜಿ ಕಾಲೇಜಿನ ಪ್ರೊ. ರಾಮಕೃಷ್ಣ ಅವರ ಕೊಲೆ ಪ್ರಕರಣ ಸಂಬಂಧ ಹೈಕೋರ್ಟ್ ನಲ್ಲಿ ತೀರ್ಪು ವೇಳೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ . ಈ ಪ್ರಕರಣದಲ್ಲಿ ಉಳಿದ ಐದು ಜನರಿಗೆ ಜೀವವಾಧಿ ಶಿಕ್ಷೆ ಪ್ರಕಟವಾಗಿ ಜೈಲು ಸೇರಿದ್ದರು. ಸುಪ್ರೀಂ ಕೋರ್ಟ್ ನಿಂದ ಜ.8 ರಂದು ಜಾಮೀನು ದೊರೆತ್ತಿದೆ. ಆದ್ರೆ ವಾರೆಂಟ್ ಸಂಬಂಧ ಸಿಸಿಬಿ ಪೊಲೀಸರು ಬಂಧಿಸಲು ಜನವರಿ 2 ರಂದು ಕಾವೂರು ಬಳಿ ಕಾರು ಅಡ್ಡಹಾಕಿದಾಗ ಪೊಲೀಸರ ಕೊಲೆ ಯತ್ನ ಮಾಡಲು ಪ್ರಯತ್ನ ಪಟ್ಟು ಪರಾರಿಯಾಗಿದ್ದ. ಈ ಪ್ರಕರಣ ಕಾವೂರು ಪೊಲೀಸ್ ಠಾಣೆಯಲ್ಲಿ ಆಕಾಶ್ ಭವನ ಶರಣ್ ಮೇಲೆ ಕೊಲೆ ಯತ್ನ ದಾಖಲಾಗಿದೆ.

ಜ.9 ರಂದು  (ಇಂದು) ಮಂಗಳೂರಿನ ಜೆಪ್ಪು ಕುಡುಪಾಡಿಯಲ್ಲಿ ಸಿಸಿಬಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ಬಂಧಿಸಲು ಹೋದಾಗ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಪ್ರಯತ್ನಿಸಿದಾಗ ಮಂಗಳೂರು ಸಿಸಿಬಿ ಸಬ್ ಇನ್ಸ್ಪೆಕ್ಟರ್ ಸುದೀಪ್ ಎಂಬವರು ಅತ್ಮರಕ್ಷಣೆಗಾಗಿ ಶರಣ್ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಸದ್ಯ ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

- Advertisement -

Latest News

error: Content is protected !!