Thursday, November 19, 2026
Homeಅಪರಾಧಮಹಿಳೆ ವಾಕಿಂಗ್‌ ಹೋದ ವೇಳೆ ಮೀಟರ್ ಬಾಕ್ಸ್‌ನಲ್ಲಿದ್ದ ಕೀಲಿ ಬಳಸಿ ಮನೆಗೆ ನುಗ್ಗಿದ ಕಳ್ಳರು; 5...

ಮಹಿಳೆ ವಾಕಿಂಗ್‌ ಹೋದ ವೇಳೆ ಮೀಟರ್ ಬಾಕ್ಸ್‌ನಲ್ಲಿದ್ದ ಕೀಲಿ ಬಳಸಿ ಮನೆಗೆ ನುಗ್ಗಿದ ಕಳ್ಳರು; 5 ಪವನ್ ಚಿನ್ನ, ನಗದು ದೋಚಿ ಪರಾರಿ!

- Advertisement -
- Advertisement -

ಕಾಸರಗೋಡು: ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಪನಯಾಲ್ ಪೆರಿಯಾಟಡ್ಕದಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಐದು ಪವನ್ ಚಿನ್ನಾಭರಣ ಹಾಗೂ 3 ಸಾವಿರ ರೂಪಾಯಿ ನಗದು ಕಳವು ಮಾಡಿ ಪರಾರಿಯಾಗಿದ್ದಾರೆ.

ನೀರಾಟಿ ನಿವಾಸಿ ಧನ್ಯ ಅವರ ಮನೆಯಲ್ಲಿ ಗುರುವಾರ ಮುಂಜಾನೆ 5ರಿಂದ 6 ಗಂಟೆಯ ನಡುವೆ ಈ ಕಳವು ನಡೆದಿದೆ. ಧನ್ಯ ಅವರು ಪ್ರತಿದಿನದಂತೆ ಮುಂಜಾನೆ ವಾಯುವಿಹಾರಕ್ಕೆ ತೆರಳುವ ಮೊದಲು ಮನೆಯ ಬಾಗಿಲಿಗೆ ಬೀಗ ಹಾಕಿ, ವಿದ್ಯುತ್ ಮೀಟರ್ ಪೆಟ್ಟಿಗೆಯಲ್ಲಿ ಕೀಲಿಯನ್ನು ಇಟ್ಟಿದ್ದರು. ಇದನ್ನೇ ಗಮನಿಸಿದ ಕಳ್ಳರು ಮೀಟರ್ ಪೆಟ್ಟಿಗೆಯಲ್ಲಿದ್ದ ಕೀಲಿಯನ್ನು ಬಳಸಿ ಬಾಗಿಲು ತೆರೆದು ಮನೆಯೊಳಗೆ ನುಗ್ಗಿದ್ದಾರೆ. ಬಳಿಕ ಕಪಾಟಿನಲ್ಲಿದ್ದ ಚಿನ್ನಾಭರಣ ಹಾಗೂ ನಗದನ್ನು ಕಳವು ಮಾಡಿದ್ದಾರೆ.

ಬೆಳಗ್ಗೆ 6 ಗಂಟೆಗೆ ಮನೆಗೆ ಮರಳಿದ ಧನ್ಯ ಅವರು ಕಪಾಟನ್ನು ಪರಿಶೀಲಿಸಿದಾಗ ಕಳವು ನಡೆದಿರುವುದು ಬೆಳಕಿಗೆ ಬಂದಿದೆ. ತಕ್ಷಣ ತಮ್ಮ ಮಾವ ಮಣಿ ನೀರಾಟಿ ಅವರಿಗೆ ಮಾಹಿತಿ ನೀಡಿದ್ದು, ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಬೇಕಲ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಹೆಚ್ಚಿನ ತನಿಖೆಗಾಗಿ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಕಳವು ನಡೆದ ಸಂದರ್ಭದಲ್ಲಿ ಧನ್ಯ ಅವರ ಪುತ್ರಿ ಮನೆಯ ಮೇಲಿನ ಮಹಡಿಯ

- Advertisement -

Latest News

error: Content is protected !!