- Advertisement -
![]()
- Advertisement -
ಪುತ್ತೂರು: ಇಲ್ಲಿನ ಖಾಸಗಿ ಆಸ್ಪತ್ರೆಯ ನರ್ಸ್ ಒಬ್ಬರ ನಿರ್ಲಕ್ಷ್ಯಕ್ಕೆ ಮಗುವೊಂದು ಸಾವನ್ನಪ್ಪಿದೆ ಎಂಬ ಆರೋಪ ಕೇಳಿ ಬಂದಿದೆ.
ಗಣೇಶ್ ಹಾಗೂ ಚೈತ್ರಾ ದಂಪತಿ ಕೆಲವು ವಾರಗಳ ಹಿಂದೆ ಜನಿಸಿದ್ದ ತಮ್ಮ ಮಗುವನ್ನು ಅನಾರೋಗ್ಯದ ಹಿನ್ನೆಲೆ ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದರು.ಆಸ್ಪತ್ರೆಯ ನರ್ಸ್ ಮಗುವಿಗೆ ಮೂರು ಡೋಸ್ ಇಂಜೆಕ್ಷನ್ ನೀಡಿ, ಬಳಿಕ ಕಫ ತೆಗೆಯಲು ನೇಬುಲೈಸರ್ ಅಳವಡಿಸಿದ್ದಾರೆ. ಬಳಿಕ ಹಾಕಿ ಬಿಟ್ಟು ನರ್ಸ್ ತೆರಳಿದ್ದಾರೆ. ಹೀಗಾಗಿ ಉಸಿರುಗಟ್ಟಿ ಮಗು ಸಾವನ್ನಪ್ಪಿದೆ ಎಂದು ಹೆತ್ತವರು ಆರೋಪಿಸಿದ್ದಾರೆ.ಈ ಬಗ್ಗೆ ಮಗುವಿನ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
- Advertisement -


