Saturday, June 6, 2026
Homeತಾಜಾ ಸುದ್ದಿಕೆಇಎ ವತಿಯಿಂದ ನಡೆದ ವಾಣಿಜ್ಯ ಪರೀಕ್ಷೆಗಳ ಫಲಿತಾಂಶ ಪ್ರಕಟ

ಕೆಇಎ ವತಿಯಿಂದ ನಡೆದ ವಾಣಿಜ್ಯ ಪರೀಕ್ಷೆಗಳ ಫಲಿತಾಂಶ ಪ್ರಕಟ

- Advertisement -
- Advertisement -

ಬೆಂಗಳೂರು: ಜನವರಿ ತಿಂಗಳಿನಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ(ಇತರೆ ಪರೀಕ್ಷೆಗಳು) ವತಿಯಿಂದ ನಡೆಸಲಾದ ವಾಣಿಜ್ಯ ಪರೀಕ್ಷೆಯ ಶೀಘ್ರಲಿಪಿಯ ಪ್ರವೀಣ ದರ್ಜೆ, ಪ್ರೌಢ ದರ್ಜೆ ಹಾಗೂ ಬೆರಳಚ್ಚು ಪ್ರೌಢ ದರ್ಜೆ ವಿಷಯಗಳ ಫಲಿತಾಂಶ ಪ್ರಕಟವಾಗಿದೆ.

ಕರ್ನಾಟಕ ಪರೀಕ್ಷಾ ಮಂಡಳಿಯ ಜಾಲತಾಣ www.sslc.karnataka.gov.in ನಲ್ಲಿ ಫಲಿತಾಂಶ ಪ್ರಕಟಿಸಲಾಗಿದೆ. ನಾಳೆ ವಾಣಿಜ್ಯ ಸಂಸ್ಥೆಗಳ ಲಾಗಿನ್‌ನಲ್ಲಿ ಫಲಿತಾಂಶ ಲಭ್ಯ ವಾಗಲಿದೆ‌.

ವಾಣಿಜ್ಯ ಸಂಸ್ಥೆಯ ಮುಖ್ಯಸ್ಥರು ತಮ್ಮ ವಾಣಿಜ್ಯ ಸಂಸ್ಥೆಯ ಲಾಗಿನ್‌ನಿಂದ ಫಲಿತಾಂಶವನ್ನು ಡೌನ್‌ಲೋಡ್ ಮಾಡಿಕೊಂಡು ಸಂಸ್ಥೆಯಲ್ಲಿ ಪ್ರಕಟಿಸಬಹುದಾಗಿದೆ.

ಅಭ್ಯರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಕರ್ನಾಟಕ ಪರೀಕ್ಷಾ ಮಂಡಳಿ(ಇತರೆ ಪರೀಕ್ಷೆಗಳು) ನಿರ್ದೇಶಕ
ಎಂ.ಆರ್. ಮಾರುತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.‌

- Advertisement -

Latest News

error: Content is protected !!