Sunday, April 28, 2024
Homeಆರಾಧನಾಮಂಗಳೂರು: ಶಬರಿಮಲೆಗೆ ಹೋಗುವ ಅಯ್ಯಪ್ಪ ಭಕ್ತರು ವಾವರ ಮಸೀದಿಯನ್ನು ಸಂದರ್ಶಿಸಿ ಹೋಗಬೇಕೆನ್ನುವುದುಕಟ್ಟುಕಥೆ, ಅವನೊಬ್ಬ ದರೋಡೆ ಕೋರ:...

ಮಂಗಳೂರು: ಶಬರಿಮಲೆಗೆ ಹೋಗುವ ಅಯ್ಯಪ್ಪ ಭಕ್ತರು ವಾವರ ಮಸೀದಿಯನ್ನು ಸಂದರ್ಶಿಸಿ ಹೋಗಬೇಕೆನ್ನುವುದುಕಟ್ಟುಕಥೆ, ಅವನೊಬ್ಬ ದರೋಡೆ ಕೋರ: ವಜ್ರದೇಹಿ ಶ್ರೀ

spot_img
- Advertisement -
- Advertisement -

ಮಂಗಳೂರು: ಶಬರಿಮಲೆಗೆ ಹೋಗುವ ಅಯ್ಯಪ್ಪ ಭಕ್ತರು ವಾವರ ಮಸೀದಿಗೆ ಹೋಗಬಾರದು, ವಾವರ ಮಸೀದಿಯನ್ನು ಸಂದರ್ಶಿಸಿ ಹೋಗಬೇಕೆನ್ನೋದು ಕಟ್ಟುಕಥೆ, ವಾವರ ಒಬ್ಬ ದರೋಡೆ ಕೋರ, ಅವನೊಬ್ಬ ಶಬರಿಮಲೆ ಯನ್ನು ಲೂಟಿ ಮಾಡಲು ಬಂದವ ಆದ್ದರಿಂದ ಅಯ್ಯಪ್ಪ ಮಾಲಾಧಾರಿಗಳು ಯಾವುದೇ ಕಾರಣಕ್ಕೂ ಅಲ್ಲಿ ಕಾಣಿಕೆ ಹಾಕಬಾರದು, ಅಲ್ಲಿ ಮುಕ್ರಿ ಹಾಕುವ ಭಸ್ಮಧಾರಣೆ ಮಾಡಬಾರದು, ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.

ಅಯ್ಯಪ್ಪ ಸ್ವಾಮಿ ಎಷ್ಟೋ ಸಾವಿರ ವರ್ಷಗಳ ಮೊದಲು ಇದ್ದವರು, ವಾವರ ಬಂದದ್ದು ಕ್ರಿ.ಶ ದಲ್ಲಿ, ಹೇಗೆ ಅವ ಅಯ್ಯಪ್ಪ ಸ್ವಾಮಿಯ ಜೊತೆ ಯುದ್ಧ ಮಾಡಿದ ಇದು ಕಟ್ಟುಕತೆ ಎಂದರು. ವಾವರ ಒಬ್ಬ ಮತಾಂಧ, ಆತನ ದರ್ಶನ ಮಾಡೋದು ಹಿಂದೂಗಳಿಗೆ ನಿಷಿದ್ಧ ಹಿಂದೂ ಧರ್ಮದಲ್ಲಿ ಅದರದ್ದೇ ಆದ ಕಟ್ಟುಕಟ್ಟಳೆ ಇದೆ. ಇರುಮುಡಿ ಹೊತ್ತು ಹೋಗೋದು ಅಯ್ಯಪ್ಪನ ದರ್ಶನಕ್ಕೆ ವಾವರನ ಪೂಜೆಗೆ ಅಲ್ಲ. ಗುರುಸ್ವಾಮಿಗಳು ಈ ಬಗ್ಗೆ ಭಕ್ತರಿಗೆ ಮನವರಿಕೆ ಮಾಡಬೇಕು ಎಂದು ಆಗ್ರಹಿಸಿದರು.

- Advertisement -
spot_img

Latest News

error: Content is protected !!