Thursday, June 25, 2026
Homeಅಪರಾಧಮೆಟ್ರೋದಲ್ಲಿ ಮಹಿಳಾ ಟೆಕ್ಕಿಯ ಫೋಟೋ, ವಿಡಿಯೋ ಕ್ಲಿಕ್ಕಿಸಿದ ಆಯುರ್ವೇದ ವೈದ್ಯ

ಮೆಟ್ರೋದಲ್ಲಿ ಮಹಿಳಾ ಟೆಕ್ಕಿಯ ಫೋಟೋ, ವಿಡಿಯೋ ಕ್ಲಿಕ್ಕಿಸಿದ ಆಯುರ್ವೇದ ವೈದ್ಯ

- Advertisement -
- Advertisement -

ಬೆಂಗಳೂರು: ನಾಡಪ್ರಭು ಕೆಂಪೇಗೌಡ (ಮೆಜೆಸ್ಟಿಕ್‌) ನಿಲ್ದಾಣದಿಂದ ಜೆ.ಪಿ.ನಗರ ನಿಲ್ದಾಣಕ್ಕೆ ಡಿ. 25 ರಂದು ಮಹಿಳಾ ಟೆಕ್ಕಿಯೋರ್ವರು ಪ್ರಯಾಣಿಸುತ್ತಿದ್ದ ಬೋಗಿಯಲ್ಲೇ ಕುಳಿತಿದ್ದ ವೈದ್ಯನೋರ್ವ, ಟೆಕ್ಕಿಯ ಪೋಟೋ ಮತ್ತು ವಿಡಿಯೋ ಸೆರೆಹಿಡಿದು ಸಿಕ್ಕಿ ಬಿದ್ದ ಘಟನೆ ನಡೆದಿದೆ.

ಮೆಟ್ರೋ ರೈಲಿನಲ್ಲಿ ಮಹಿಳೆಯ ಫೋಟೋ ಮತ್ತು ವಿಡಿಯೋವನ್ನು ಆರೋಪಿ ಆಯುರ್ವೇದ ವೈದ್ಯ ಮಹೇಶ್‌ ಅಲಿಯಾಸ್‌ ಮಲ್ಲೇಶ್‌ ಎಂಬಾತನು ತನ್ನ ಮೊಬೈಲ್ ಮೂಲಕ ಸೆರೆ ಹಿಡಿದಿದ್ದ. ಅದನ್ನು ಗಮನಿಸಿದ ಮಹಿಳಾ ಟೆಕಿ, ಆರೋಪಿಯನ್ನು ಪ್ರಶ್ನಿಸಿದ್ದಾರೆ. ಬಳಿಕ ಜಯನಗರ ಮೆಟ್ರೋ ನಿಲ್ದಾಣಕ್ಕೆ ಬಂದಾಗ ಟೆಕಿ ಈ ವಿಚಾರವನ್ನು ನಿಲ್ದಾಣದ ಸೆಕ್ಯೂರಿಟಿ ಗಾರ್ಡ್‌ಗಳಿಗೆ ತಿಳಿಸಿದ್ದಾರೆ. ನಂತರದಲ್ಲಿ ಬಿಎಂಆರ್‌ಸಿಎಲ್‌ ಭದ್ರತಾ ಸಿಬ್ಬಂದಿ ಈತನನ್ನು ಥಳಿಸಿ ಜಯನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.

ಪೊಲೀಸರು ಆರೋಪಿಯ ಮೊಬೈಲ್‌ ಅನ್ನು ಪರಿಶೀಲಿಸಿದಾಗ ಟೆಕಿಯ ವಿಡಿಯೋ ಮತ್ತು ಫೋಟೊಗಳು ಪತ್ತೆಯಾಗಿವೆ. ಅಲ್ಲದೆ, ಸಾಕಷ್ಟು ಅಶ್ಲೀಲ ವಿಡಿಯೊಗಳು ಪತ್ತೆಯಾಗಿವೆ. ಅವೆಲ್ಲವನ್ನೂ ಡಿಲೀಟ್‌ ಮಾಡಿಸಲಾಗಿದೆ.

ಆಯುರ್ವೇದ ವೈದ್ಯನಾಗಿರುವ ಮಹೇಶ್ ಮೂಲತಃ ದಾವಣಗೆರೆಯವನಾಗಿದ್ದು, ನಗರದ ಜೆ.ಪಿ. ನಗರದಲ್ಲಿ ವಾಸವಾಗಿದ್ದಾನೆ. ಮಹಿಳಾ ಸಾಫ್ಟ್‌ವೇರ್‌ ಎಂಜಿನಿಯರ್‌ ದೂರು ಕೊಟ್ಟಿದ್ದು, ಮಹೇಶ್‌ ವಿರುದ್ಧ ಅಸಂಜ್ಞೆಯ ಪ್ರಕರಣ ದಾಖಲಿಸಿಕೊಂಡು ಬಿಡುಗಡೆಗೊಳಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

- Advertisement -

Latest News

error: Content is protected !!