Thursday, June 4, 2026
Homeಕರಾವಳಿಉಡುಪಿಉಡುಪಿ: ಆಟೋ ಚಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ

ಉಡುಪಿ: ಆಟೋ ಚಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ

- Advertisement -
- Advertisement -

ಉಡುಪಿ: ಆಟೋ ಚಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿಯ ಪಳ್ಳಿಗುಡ್ಡೆ ಕೋಟೆ ಎಂಬಲ್ಲಿ ನಡೆದಿದೆ. ಪಳ್ಳಿಗುಡ್ಡೆ ಕೋಟೆ ನಿವಾಸಿ ದೀಪಕ್‌ ಆರ್‌. (34) ಮೃತ ಆಟೋ ಚಾಲಕ.

ದೀಪಕ್ ಉಡುಪಿ ಕಲ್ಸಂಕ ಆಟೋ ರಿಕ್ಷಾ ನಿಲ್ದಾಣದಲ್ಲಿ ರಾತ್ರಿ ಪಾಳಿಯಲ್ಲಿ ಚಾಲಕರಾಗಿ ದುಡಿಯುತ್ತಿದ್ದರು.  ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ .

ಅವಿವಾಹಿತ ದೀಪಕ್‌ ಆರ್‌. ಮದ್ಯ ಸೇವನೆ ಚಟವನ್ನು ಹೊಂದಿದ್ದು, ರಾತ್ರಿ ಪಾಳಿಯಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಬಂದು ರೂಂನಲ್ಲಿ ಮಲಗಿದ್ದರು. ಸಂಜೆ ತಾಯಿ ರೂಂಗೆ ಹೋಗಿ ನೋಡಿದಾಗ ಒಳಗಿನಿಂದ ಬಾಗಿಲನ್ನು ಲಾಕ್‌ ಮಾಡಲಾಗಿತ್ತು.

ಬಳಿಕ ನೆರೆಹೊರೆಯವರು ಸೇರಿ ಬಾಗಿಲು ಮುರಿದು ಒಳಗೆ ಹೋಗಿ ನೋಡಿದಾಗ ದೀಪಕ್‌ ರೂಂನ ಮೇಲ್ಛಾವಣಿಯ ಕಬ್ಬಿಣದ ಹುಕ್ಕಿಗೆ ಬಟ್ಟೆ ತುಂಡನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

- Advertisement -

Latest News

error: Content is protected !!