ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ (CSMT) ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್ ವಿಸ್ತರಣೆ ಕಾಮಗಾರಿ ನಡೆಯುತ್ತಿರುವುದರಿಂದ, ಮಧ್ಯ ರೈಲ್ವೆಯು ಕೆಲವು ಪ್ರಮುಖ ರೈಲುಗಳ ಸಂಚಾರವನ್ನು ದಾದರ್ ಮತ್ತು ಠಾಣೆ ನಿಲ್ದಾಣಗಳಲ್ಲೇ ಭಾಗಶಃ ರದ್ದುಗೊಳಿಸುತ್ತಿದೆ.
ಈ ತಾತ್ಕಾಲಿಕ ಬದಲಾವಣೆಯು ಮೇ 27 ರಿಂದ ಜೂನ್ 12 ರವರೆಗೆ (ಒಟ್ಟು 25 ದಿನಗಳ ಕಾಲ) ಜಾರಿಯಲ್ಲಿರಲಿದ್ದು, ಮಡ್ಗಾಂವ್‌ನಿಂದ ಹೊರಡುವ ಮಡ್ಗಾಂವ್ – ಮುಂಬೈ CSMT ತೇಜಸ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 22120) ಮುಂಬೈ CSMT ಬದಲಿಗೆ ದಾದರ್ ನಿಲ್ದಾಣದಲ್ಲಿ ತನ್ನ ಪ್ರಯಾಣ ಕೊನೆಗೊಳಿಸಲಿದೆ. ಅದೇ ರೀತಿ, ಮಂಗಳೂರು ಜಂಕ್ಷನ್‌ನಿಂದ ಹೊರಡುವ ಮಂಗಳೂರು ಜಂಕ್ಷನ್ – ಮುಂಬೈ CSMT ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 12134) ರೈಲನ್ನು ಮುಂಬೈ CSMT ಬದಲಿಗೆ ಠಾಣೆ ನಿಲ್ದಾಣದಲ್ಲೇ ಕೊನೆಗೊಳಿಸಲಾಗುತ್ತದೆ.
ಮಂಗಳೂರು ಮತ್ತು ಗೋವಾ ಭಾಗದಿಂದ ಮುಂಬೈಗೆ ಪ್ರಯಾಣಿಸುವ ಸಾರ್ವಜನಿಕರು ಈ ತಾತ್ಕಾಲಿಕ ವೇಳಾಪಟ್ಟಿಯನ್ನು ಗಮನಿಸಿ ಸಹಕರಿಸಬೇಕಾಗಿ ಮಧ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುನಿಲ್ ಬಿ. ನಾರ್ಕರ್ ವಿನಂತಿಸಿದ್ದಾರೆ.


