Friday, June 26, 2026
Homeತಾಜಾ ಸುದ್ದಿಸಿಎಂ ಮನೆ ಎದುರೇ ವೃದ್ಧ ಆತ್ಮಹತ್ಯೆಗೆ ಯತ್ನ!

ಸಿಎಂ ಮನೆ ಎದುರೇ ವೃದ್ಧ ಆತ್ಮಹತ್ಯೆಗೆ ಯತ್ನ!

- Advertisement -
- Advertisement -

ಬೆಂಗಳೂರಿನ ಆರ್.ಟಿ. ನಗರದಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿ ನಿವಾಸದ ಎದುರು, ವೃದ್ಧನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಸುಂಕದಕಟ್ಟೆ ನಿವಾಸಿ ವೃದ್ಧ ಚಂದ್ರಶೇಖರ್ ಎಂಬವರು, ಅನ್ನಪೂರ್ಣೇಶ್ವರಿ ನಗರ ಸಬ್ ಇನ್ಸ್ಪೆಕ್ಟರ್ ವಿರುದ್ಧ ಆರೋಪ ಮಾಡಿದ್ದು, ಸೈಟ್ ಮಾರಾಟದ ವಿಚಾರದಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ವಿಷ ಸೇವಿಸಿ ಆತ್ನಹತ್ಯೆಗೆ ಯತ್ನಿಸಿದ್ದಾರೆ.

ಈ ವೇಳೆ ಅಲ್ಲೇ ಇದ್ದ ಪೊಲೀಸರು ವೃದ್ಧನನ್ನ ಪಕ್ಕಕ್ಕೆ ಕರೆದೊಯ್ದು ವಿಚಾರಿಸಿ ಮಾಹಿತಿ ಪಡೆದಿದ್ದಾರೆ. ಈ ಹಿಂದೆಯೂ ಸಿಎಂ ಎದುರು ಚಂದ್ರಶೇಖರ್ ಅಳಲು ತೋಡಿಕೊಂಡಿದ್ದರು ಎನ್ನಲಾಗಿದೆ.

- Advertisement -

Latest News

error: Content is protected !!