Sunday, June 7, 2026
Homeತಾಜಾ ಸುದ್ದಿಶಾಲಾ ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆ ಬಗ್ಗೆಸಿಎಂ ಜೊತೆ ಚರ್ಚೆ: ಶಿಕ್ಷಣ ಸಚಿವ ಬಿ.ಸಿ.‌ ನಾಗೇಶ್ ಸ್ಪಷ್ಟನೆ

ಶಾಲಾ ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆ ಬಗ್ಗೆ
ಸಿಎಂ ಜೊತೆ ಚರ್ಚೆ: ಶಿಕ್ಷಣ ಸಚಿವ ಬಿ.ಸಿ.‌ ನಾಗೇಶ್ ಸ್ಪಷ್ಟನೆ

- Advertisement -
- Advertisement -

ಬೆಂಗಳೂರು: ಶಾಲಾ ಪಠ್ಯದಲ್ಲಿ ಭಗವದ್ಗೀತೆ ಅಳವಡಿಸುವ ವಿಚಾರ ರಾಜ್ಯದಲ್ಲಿ ಚರ್ಚೆಗೆ ಬಂದಿದೆ. ಮೋರಲ್ ಸೈನ್ಸ್ ಅಳವಡಿಸುವಂತೆ ಹಲವರು ಒತ್ತಾಯಿಸಿದ್ದು, ಮುಂದಿನ ದಿನಗಳಲ್ಲಿ ಮೋರಲ್ ಸೈನ್ಸ್ ಅಳವಡಿಸುವ ಬಗ್ಗೆ ಸಿಎಂ ಜೊತೆ‌ ಮಾತನಾಡುವುದಾಗಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.

ಮುಖ್ಯಮಂತ್ರಿಗಳ ಸಲಹೆ ಮತ್ತು ಶಿಕ್ಷಣ ತಜ್ಞರ ಸಲಹೆ ಪಡೆದು ತೀರ್ಮಾನ ಮಾಡುತ್ತೇವೆ ಎಂದು ಬೆಂಗಳೂರಿನಲ್ಲಿ ಹೇಳಿರುವ ಸಚಿವ ನಾಗೇಶ್, ಭಗವದ್ಗೀತೆ ಸೇರಿಸಬಾರದು ಅಂತಾ ಏನೂ ಇಲ್ಲ, ಶಿಕ್ಷಣ ತಜ್ಞರ ಅಭಿಪ್ರಾಯದಂತೆ ಮುಂದಿನ ತೀರ್ಮಾನ ಎಂದು ಹೇಳಿದ್ದಾರೆ.

ಗುಜರಾತ್ ರಾಜ್ಯದಲ್ಲಿ ಶಾಲಾ ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆಗೆ ಚಿಂತನೆ ನಡೆದಿರುವ ಬೆನ್ನಲ್ಲೇ ರಾಜ್ಯದಲ್ಲಿ ಕೂಡಾ ಚರ್ಚೆ ಶುರುವಾಗಿದೆ.

- Advertisement -

Latest News

error: Content is protected !!