Friday, June 5, 2026
Homeಕೊಡಗುಮಡಿಕೇರಿಯಲ್ಲಿ ಅರಣ್ಯ ಸಿಬ್ಬಂದಿಯ ಕೈ ಕತ್ತರಿಸಿದ ವ್ಯಕ್ತಿ: ಗಾಯಾಳು ಮಂಗಳೂರು ಆಸ್ಪತ್ರೆಗೆ ರವಾನೆ

ಮಡಿಕೇರಿಯಲ್ಲಿ ಅರಣ್ಯ ಸಿಬ್ಬಂದಿಯ ಕೈ ಕತ್ತರಿಸಿದ ವ್ಯಕ್ತಿ: ಗಾಯಾಳು ಮಂಗಳೂರು ಆಸ್ಪತ್ರೆಗೆ ರವಾನೆ

- Advertisement -
- Advertisement -

ಮಡಿಕೇರಿ: ಅರಣ್ಯ ಸಿಬ್ಬಂದಿ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ ಕಡಿದು ಕೈಯನ್ನೇ ಕತ್ತರಿಸಿದ ಘಟನೆ ಮಡಿಕೇರಿಯಲ್ಲಿ ನಡೆದಿದೆ.

ಮಡಿಕೇರಿ ತಾಲೂಕಿನ ಕಾಲೂರು ಗ್ರಾಮದಲ್ಲಿ ಘಟನೆ ನಡೆದಿದ್ದು,
ಅರಣ್ಯ ರಕ್ಷಕ ಸಂಜೀವ (59) ಹಲ್ಲೆಗೊಳಗಾದ ಸಿಬ್ಬಂದಿಯಾಗಿದ್ದಾರೆ‌.

ತಿಮ್ಮಯ್ಯ(52) ಎಂಬಾತನಿಂದ ಸಂಜೀವ್ ಮೇಲೆ‌ ಹಲ್ಲೆ ನಡೆದಿದ್ದು, ಗಾಯಾಳು ಸಂಜೀವ ಅವರನ್ನು ಮಂಗಳೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಆರೋಪಿ ತಿಮ್ಮಯ್ಯ ಅರಣ್ಯದಲ್ಲಿ ಪರಾರಿಯಾಗಿದ್ದು, ಕಸ ವಿಲೇವಾರಿ ಸ್ಥಳಕ್ಕೆ ಸಂಬಂಧಪಟ್ಟಂತೆ ಇಬ್ಬರ ನಡುವೆ ವಿವಾದ ಏರ್ಪಟ್ಟಿತ್ತು ಎನ್ನಲಾಗಿದೆ.

ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!