Sunday, May 19, 2024
Homeಕರಾವಳಿಲಾಯಿಲದಲ್ಲಿ ಅಗ್ನಿಶಾಮಕ ದಳದಿಂದ ಬಾವಿಗೆ ಬಿದ್ದ ಹಸುವಿನ ರಕ್ಷಣೆ

ಲಾಯಿಲದಲ್ಲಿ ಅಗ್ನಿಶಾಮಕ ದಳದಿಂದ ಬಾವಿಗೆ ಬಿದ್ದ ಹಸುವಿನ ರಕ್ಷಣೆ

spot_img
- Advertisement -
- Advertisement -

ಬೆಳ್ತಂಗಡಿ: ಲಾಯಿಲ ಗ್ರಾಮದ ಕುಂಡಡ್ಕ ಪ್ರದೇಶದಲ್ಲಿ ದನವೊಂದು ಅಂಗಳದಲ್ಲಿದ್ದ ಸುಮಾರು 25 ಅಡಿ ಆಳದ ಬಾವಿಗೆ ಬಿದ್ದ ಘಟನೆ ಶನಿವಾರದಂದು ನಡೆದಿದೆ. 

ತಕ್ಣಣದಲ್ಲೇ ಮನೆಯವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಬಾವಿಯ ನೀರನ್ನು ಪಂಪ್ ಮೂಲಕ ತೆರವುಗೊಳಿಸಿದ್ದಾರೆ. ಅಗ್ನಿಶಾಮಕ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಬಂದ್ದು ದನವನ್ನು ಬಾವಿಯಿಂದ ಎತ್ತಿ ರಕ್ಷಿಸಿದ್ದಾರೆ. ಬಾವಿಯಲ್ಲಿ ನೀರು ಇದ್ದ ಕಾರಣ ದನಕ್ಕೆ ಯಾವುದೇ ರೀತಿಯ ಗಾಯಗಳಾಗಲಿಲ್ಲ. 

ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿಗಳಾದ ಠಾಣಾಧಿಕಾರಿ ಕೆ. ವಿಶ್ವನಾಥ್ ಪೂಜಾರಿ, ಚಾಲಕ ಲಿಂಗರಾಜ್ ಲಮಾಣಿ, ಮಂಗಳದಾಸ್ ನಾಯ್ಕ್ , ಮಹಮ್ಮದ್ ಜಂಬಗಿ, ವಿನೋದ್ ರಾಜ್ ಹಾಗೂ ಸ್ಥಳೀಯ ಪಂಚಾಯತ್ ಸದಸ್ಯ ಪ್ರಸಾದ್ ಶೆಟ್ಟಿ ಸೇರಿದಂತೆ ಸ್ಥಳೀಯರು ಸಹಕರಿಸಿದರು.

- Advertisement -
spot_img

Latest News

error: Content is protected !!