Saturday, June 6, 2026
Homeಕರಾವಳಿಬಂಟ್ವಾಳ: ಅಡಿಕೆ ಕದ್ದು ಪರಾರಿಯಾಗುತ್ತಿದ್ದ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು

ಬಂಟ್ವಾಳ: ಅಡಿಕೆ ಕದ್ದು ಪರಾರಿಯಾಗುತ್ತಿದ್ದ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು

- Advertisement -
- Advertisement -

ಬಂಟ್ವಾಳ: ಅಡಿಕೆ ಕದ್ದು ಪರಾರಿಯಾಗುತ್ತಿದ್ದ ಕಳ್ಳನನ್ನು ಹಿಡಿದು ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಪರ್ಲ್ಯಾ ನಿವಾಸಿ ಆರಿಫ್ ಬಂಧಿತ ಆರೋಪಿ.

ಈತ ಬ್ರಹ್ಮರಕೂಟ್ಲು ಸಮೀಪದ ಪೆರಿಯೋಡಿ ಬೀಡು ಎಂಬ ಊರಿನ ಬಾಕಿಮಾರು ಗದ್ದೆಯಲ್ಲಿ ಒಣಗಳು ಹಾಕಿದ್ದ ಅಡಿಕೆಯನ್ನು 2 ಬಾರಿ ಕದ್ದು ಪರಾರಿ ಆಗಿದ್ದಾನೆ ಎನ್ನಲಾಗಿದೆ. ಇದೀಗ 3 ನೇ ಬಾರಿ ಈತ ಸರಿ ಸುಮಾರು ಬೆಳಗ್ಗೆ 3 ಗಂಟೆ ಗೆ ರಿಕ್ಷಾದಲ್ಲಿ ಬಂದು ಕದ್ದು ಪರಾರಿ ಆಗುವುದನ್ನು ಕಂಡ ಮನೆಯವರು ಮತ್ತು ಊರ ಜನರು ಸೆರೆ ಹಿಡಿದು ಮರಕ್ಕೆ ಕಟ್ಟು ಹಾಕಿದ್ದಾರೆ.ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.

ಇವನು ಹಲವಾರು ಕಡೆಗಳಲ್ಲಿ ಅಡಿಕೆ ಕದ್ದಿದ್ದು. ಈತ ಬಿ.ಸಿ ರೋಡ್ ನಲ್ಲಿ ರಿಕ್ಷಾ ಚಾಲಕನಾಗಿ ರಾತ್ರಿ ಕಳ್ಳನಾಗಿ ಯಾರಿಗೂ ಸಂಶಯ ಬಾರದಂತೆ ವರ್ತಿಸುತ್ತಿದ್ದ ಎನ್ನಲಾಗಿದೆ. ಅಲ್ಲದೇ ರಿಕ್ಷಾ, ಮೀನು ಹಾಗೂ ಗುಜುರಿ ಮತ್ತು ತರಕಾರಿ ವ್ಯಾಪಾರಿಗಳ ರೂಪದಲ್ಲಿ ಊರಿಗೆ ಬಂದು ಕಳ್ಳತನ ಮಾಡುವುದನ್ನು ಖಯಾಲಿ ಮಾಡಿಕೊಂಡಿದ್ದ ಎನ್ನಲಾಗಿದೆ.

- Advertisement -

Latest News

error: Content is protected !!