Friday, May 10, 2024
Homeಕರಾವಳಿಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ಅಮರಾಜಿ ಡಿ. ಪಡಿವಾಳ್ ನಿಧನ

ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ಅಮರಾಜಿ ಡಿ. ಪಡಿವಾಳ್ ನಿಧನ

spot_img
- Advertisement -
- Advertisement -

ಬೆಳ್ತಂಗಡಿ: ಮಂಗಳೂರಿನ ಖ್ಯಾತ ನ್ಯಾಯವಾದಿ ಹಾಗೂ ಹಿಂದೂ ನೇತಾರರಾಗಿದ್ದ ದಿವಂಗತ ಧರಣೇಂದ್ರ ಪಡಿವಾಳ್ ರ ಪತ್ನಿ ಅಮರಾಜಿ ಡಿ. ಪಡಿವಾಳ್ ಅಲ್ಪಕಾಲದ ಅಸೌಖ್ಯದಿಂದ ನಿನ್ನೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧರಾದರು.

ರಾಷ್ಟ್ರಸೇವಿಕಾ ಸಮಿತಿಯ ಹಿರಿಯ ಕಾರ್ಯಕರ್ತೆಯಾಗಿದ್ದ ಅಮರಾಜಿಯವರು ಮೂಲತಃ ಬೆಳ್ತಂಗಡಿಯವರಾಗಿದ್ದು, ಶಿರ್ತಾಡಿ ಬಳಿಯ ಕೇಳದ ಧರಣೇಂದ್ರ ಪಡಿವಾಳ್ ರನ್ನು ವಿವಾಹದ ಬಳಿಕ ಮಂಗಳೂರಿನಲ್ಲಿ ನೆಲೆಸಿದ್ದರು. ಮೃತ ಅಮರಾಜಿಯವರು ಪುತ್ರರಾದ ಜೇಷ್ಠ ಪಡಿವಾಳ್, ಶ್ರೇಷ್ಠ ಪಡಿವಾಳ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಬೆಳ್ತಂಗಡಿಯಲ್ಲಿ ಅಂತ್ಯಕ್ರಿಯೆ
ಅಮರಾಜಿಯವರ ಅಂತ್ಯಕ್ರಿಯೆ ಇಂದು ಬೆಳ್ತಂಗಡಿಯ ಹಳೆಸೇತುವೆ ರಸ್ತೆಯ ನಿವಾಸದಲ್ಲಿ ನಡೆಯಲಿದ್ದೆ. ಇಂದು ಬೆಳಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬೆಳ್ತಂಗಡಿ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು.‌

ಇವರೊಂದಿಗೆ ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಬಿಜೆಪಿ ವಿಭಾಗ ಸಂಘಟನಾ ಕಾರ್ಯದರ್ಶ ಪ್ರಸಾದ್ ಕುಮಾರ್ ಸೇರಿದಂತೆ ರಾಷ್ಟ್ರೀಯ ಸ್ವಯಂ ಸೇವಾ ಸಂಘಟನೆಯ ಪ್ರಮುಖರು ಮತ್ತು ಬಿಜೆಪಿಯ ಮುಖಂಡರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!