Thursday, June 4, 2026
Homeಕರಾವಳಿಖ್ಯಾತ ಹಾಸ್ಯನಟ ಅರವಿಂದ ಬೋಳಾರ್ ರ ತೇಜೋವಧೆ: ಯುವವಾಹಿನಿ ಬೆಳ್ತಂಗಡಿ ಘಟಕದಿಂದ ಖಂಡನೆ

ಖ್ಯಾತ ಹಾಸ್ಯನಟ ಅರವಿಂದ ಬೋಳಾರ್ ರ ತೇಜೋವಧೆ: ಯುವವಾಹಿನಿ ಬೆಳ್ತಂಗಡಿ ಘಟಕದಿಂದ ಖಂಡನೆ

- Advertisement -
- Advertisement -

ಬೆಳ್ತಂಗಡಿ: ತುಳುನಾಡಿನ ಹಾಸ್ಯ ಕಲಾವಿದ ತುಳುವ ಮಾಣಿಕ್ಯ ಅರವಿಂದ ಬೋಳಾರ್ ಇವರು ಕೆಲವು ದಿನಗಳ ಹಿಂದೆ ದೈಜಿವರ್ಲ್ಡ್ ನ್ಯೂಸ್ ಚಾನೆಲ್ ನ ಕಾರ್ಯಕ್ರಮವನ್ನು ನೀಡುವ ಸಂಧರ್ಭದಲ್ಲಿ ಜ್ಯೋತಿಷಿಯ ಪಾತ್ರವನ್ನು ನಿರ್ವಹಿಸಿದ್ದರು. ಈ ಪಾತ್ರದಲ್ಲಿ ಯಾರಿಗೂ ಅಪಮಾನ ಮಾಡದೆ ಓರ್ವ ಹಾಸ್ಯನಟನಾಗಿ ಅದ್ಭುತವಾಗಿ ತುಳು ಅಭಿಮಾನಿಗಳಿಗೆ ಮನರಂಜನೆಯನ್ನು ನೀಡಿದ್ದರು. ಇದೀಗ ಇವರ ಜನಪ್ರೀಯತೆಯನ್ನು ಸಹಿಸದ ಕೆಲವರು ಇವರ ವಿರುದ್ದವಾಗಿ ಪೋಲಿಸ್ ಠಾಣೆಯಲ್ಲಿ ಸತ್ಯಕ್ಕೆ ದೂರವಾದ ಆರೋಪ ಹೊರಿಸಿ ದೂರನ್ನು ದಾಖಲಿಸಿದ್ದಾರೆ.

ಆದರೆ ಅರವಿಂದ್ ಬೋಳಾರ್ ಒಬ್ಬ ತುಳುನಾಡಿನ ಅತ್ಯಂತ ಜನಪ್ರಿಯ ನಟನಾಗಿದ್ದು, ಯಕ್ಷಗಾನ, ನಾಟಕ, ಚಲನಚಿತ್ರಗಳಲ್ಲಿ ನಟಿಸಿ ತುಳುನಾಡಿಗೆ ಕೀರ್ತಿ ತಂದಿರುವ ಮಹಾನ್ ಕಲಾವಿದ. ಇಂತಹ ಕಲಾವಿಧನ ಬಗ್ಗೆ ಅಪಪ್ರಚಾರ ಮಾಡಲು ಯತ್ನಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ಅತ್ಯಂತ ಸರಳ ಹಾಗೂ ತುಳುನಾಡಿನ ಸರ್ವ ಜನಾಂಗದವರ ಮನಗೆದ್ದ ಮೇರು ನಟ ಅರವಿಂದ ಬೋಳಾರ್.ಇವರ ಪಾತ್ರದಲ್ಲಿ ಯಾವುದೇ ವರ್ಗಕ್ಕೆ ನೋವುಂಟು ಮಾಡಿರುವ ವಿಚಾರ ಬಂದಿರುವುದಿಲ್ಲ.

ಆದುದರಿಂದ ನಮ್ಮ ಯುವವಾಹಿನಿ (ರಿ) ಬೆಳ್ತಂಗಡಿ ಘಟಕವು ಇವರಿಗೆ ಆದ ಅನ್ಯಾಯವನ್ನು ತೀವ್ರವಾಗಿ ಖಂಡಿಸುತ್ತದೆ ಹಾಗೂ ಮುಂದಿನ ದಿನಗಳಲ್ಲಿ ಇಂತಹ ವಿಚಾರಗಳು ಮರುಕಳಿಸಿದರೆ ಪ್ರತಿಭಟನೆ ಹಾಗೂ ಕಾನೂನಿನ ಮೊರೆ ಹೋಗುವುದು ನಮಗೆ ಅನಿವಾರ್ಯವಾಗಲಿದೆ ಎಂದು ಸಂಘಟನೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ.

- Advertisement -

Latest News

error: Content is protected !!