Friday, May 17, 2024
Homeತಾಜಾ ಸುದ್ದಿ34 ಪ್ರಯಾಣಿಕರಿದ್ದ ಬಸ್ಸನ್ನೇ ಕಿಡ್ನಾಪ್ ಮಾಡಿಸಿದ ಫೈನಾನ್ಸ್ ಮಾಲೀಕ: ಮುಂದೇನು?

34 ಪ್ರಯಾಣಿಕರಿದ್ದ ಬಸ್ಸನ್ನೇ ಕಿಡ್ನಾಪ್ ಮಾಡಿಸಿದ ಫೈನಾನ್ಸ್ ಮಾಲೀಕ: ಮುಂದೇನು?

spot_img
- Advertisement -
- Advertisement -

ಲಕ್ನೋ: ಕೊಟ್ಟ ಸಾಲವನ್ನ ವಸೂಲಿ ಮಾಡಲು ಫೈನಾನ್ಸ್​ ಮಾಲೀಕನೊಬ್ಬ 34 ಪ್ರಯಾಣಿಕರಿದ್ದ ಬಸ್​ ಅನ್ನೇ ಕಿಡ್ನಾಪ್​ ಮಾಡಿರೋ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಬಸ್ ಹರ್ಯಾಣದ ಗುರುಗ್ರಾಮದಿಂದ ಹೊರಟು ಮಧ್ಯಪ್ರದೇಶಕ್ಕೆ ತೆರಳುತ್ತಿದ್ದಾಗ ಲಕ್ನೋ ಬೈಪಾಸ್ ಬಳಿ ಈ ಘಟನೆ ನಡೆದಿದೆ.

ಪ್ರಯಾಣಿಕರ ಸಹಿತ ಬಸ್​ನ ಫೈನಾನ್ಸ್​ ಮಾಲೀಕ ನಿಗೂಢ ಸ್ಥಳಕ್ಕೆ ಕರೆದೊಯ್ದಿದ್ದಾನೆ ಎಂದು ತಿಳಿದುಬಂದಿದೆ. ಬಸ್​ನ ಚಾಲಕ ಮತ್ತು ಕಂಡಕ್ಟರ್​ ನನ್ನು ಕೆಳಗಿಳಿಸಿ ಮಾಲೀಕ ವಾಹನವನ್ನ ಹೈಜಾಕ್​ ಮಾಡಿದ್ದಾನಂತೆ. ಇನ್ನು ಸಾಲದ ಬಗ್ಗೆ ಮಾಹಿತಿ ಇದ್ದ ಚಾಲಕ ಮತ್ತು ಕಂಡೆಕ್ಟರ್​ ಬಸ್​ನಿಂದ ಇಳಿದ ಬಳಿಕ ಪೊಲೀಸರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.

ಉತ್ತರ ಪ್ರದೇಶ ಸರ್ಕಾರದ ಹೇಳಿಕೆ:
ಹಣಕಾಸು ಕಂಪನಿ ಅಕ್ರಮವಾಗಿ ಬಸ್ ವಶಪಡಿಸಿಕೊಂಡಿದೆ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ. ಬಳಿಕ ಪೊಲೀಸರು ನೀಡಿದ ಮಾಹಿತಿ ಪ್ರಕಾರ ಹೈಜಾಕ್ ನಡೆದಿಲ್ಲ. ಶ್ರೀರಾಮ್ ಫೈನಾನ್ಸ್ ಕಂಪನಿ ಬಸ್ ಸೀಜ್ ಮಾಡಿದೆ. ಇಎಂಐ ನೀಡದ ಹಿನ್ನೆಲೆಯಲ್ಲಿ ಬಸ್ ನ್ನು ಸೀಸ್ ಮಾಡಿದ್ದಾರೆ ಎನ್ನಲಾಗಿದೆ. ಎಲ್ಲಾ ಚಾಲಕ ಸಿಬ್ಬಂದಿ ಮತ್ತು ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.

- Advertisement -
spot_img

Latest News

error: Content is protected !!