Thursday, June 4, 2026
Homeಕರಾವಳಿಡಾ.ಪದ್ಮಪ್ರಸಾದ ಅಜಿಲರ ಮಾತೃಶ್ರೀ ಸರಸ್ವತಿ ಅಮ್ಮ ನಿಧನ

ಡಾ.ಪದ್ಮಪ್ರಸಾದ ಅಜಿಲರ ಮಾತೃಶ್ರೀ ಸರಸ್ವತಿ ಅಮ್ಮ ನಿಧನ

- Advertisement -
- Advertisement -

ಬೆಳ್ತಂಗಡಿ: ಅಳದಂಗಡಿ ಅರಮನೆಯ ಅರಸರಾಗಿದ್ದ, ದಿ.ಕೃಷ್ಣರಾಜ ಅಜಿಲರ ಧಮ೯ಪತ್ನಿ ಶ್ರೀಮತಿ ಸರಸ್ವತಿ ಅಮ್ಮನವರು ಅಲ್ಪಕಾಲದ ಅನಾರೋಗ್ಯದಿಂದಾಗಿ ನಿನ್ನೆ ವಿಧಿವಶರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.

ದಾನಧರ್ಮದ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ಅವರು, ಪುತ್ರರಾದ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲ, ಲೋಕೋಪಯೋಗಿ ಇಲಾಖೆ ಸ.ಕಾ.ಅಭಿಯಂತರ ಶಿವಪ್ರಸಾದ್ ಅಜಿಲ, ಪುತ್ರಿ ಪುಷ್ಪಲತಾ ಹಾಗೂ ಅಳಿಯ, ಸೊಸೆಯಂದಿರು,ಮೊಮ್ಮಕ್ಕಳು, ಬಂಧು-ವಗ೯ರವರನ್ನು ಅಗಲಿದ್ದಾರೆ.

ಇನ್ನು  ಇವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ, ಶಾಸಕ ಹರೀಶ್ ಪೂಂಜ, ಮಾಜಿ ಶಾಸಕ ವಸಂತ ಬಂಗೇರ ಹಾಗೂ ಗಣ್ಯರು ಅರಮನೆಗೆ ಆಗಮಿಸಿ, ಅಂತಿಮ ನಮನ ಸಲ್ಲಿಸಿದರು.

- Advertisement -

Latest News

error: Content is protected !!