Thursday, June 4, 2026
Homeಕರಾವಳಿಮಂಗಳೂರು: ಕೇರಳಕ್ಕೆ ಅಕ್ರಮವಾಗಿ ಮದ್ಯ ಸಾಗಾಟ, ಇಬ್ಬರು ಬಂಧನ

ಮಂಗಳೂರು: ಕೇರಳಕ್ಕೆ ಅಕ್ರಮವಾಗಿ ಮದ್ಯ ಸಾಗಾಟ, ಇಬ್ಬರು ಬಂಧನ

- Advertisement -
- Advertisement -

ಮಂಗಳೂರು: ತೊಕ್ಕೊಟ್ಟಿನಿಂದ ಕೇರಳಕ್ಕೆ ಕಾರಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ದಕ್ಷಿಣ ಪೊಲೀಸ್ ಉಪವಿಭಾಗದ ಎಸಿಪಿಯವರ ನಿರ್ದೇಶನದಂತೆ ಉಳ್ಳಾಲ ಠಾಣಾಧಿಕಾರಿ ನೇತೃತ್ವದಲ್ಲಿ ಬಂಧಿಸಲಾಗಿದೆ.

ಕಾಸರಗೋಡಿನ ಬಂದ್ಯೋಡು ಮಂಗಳಪಾಡಿಯ ರೆಜಿನ್ (23) ಮತ್ತು ಧೀರಜ್ (21) ಬಂಧಿತರು.

ಇಬ್ಬರು ದಾಖಲೆಗಳಿಲ್ಲದ ಮಾರುತಿ 800 ಕಾರಲ್ಲಿ ಅಕ್ರಮ ಮದ್ಯ ಸಾಗಾಟ ನಡೆಸುತ್ತಿರುವ ಖಚಿತ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಕೋಟೆಕಾರು ಅಜ್ಜನಕಟ್ಟೆ ಬಳಿ ತಪಾಸಣೆ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ.

ಕೋಟೆಕಾರು ಬಳಿ ಕಾರು ನಿಲ್ಲಿಸಲು ಸೂಚಿಸಿದಾಗ ಚಾಲಕ ಕಾರು ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಪೊಲೀಸರು ಸುತ್ತುವರಿದು ಕಾರನ್ನು‌ ಅಡ್ಡಗಟ್ಟಿ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

225 ಲೀಟರ್ ಅಕ್ರಮ ಮದ್ಯ ಮತ್ತು ಬಿಳಿ ಬಣ್ಣದ ಮಾರುತಿ 800 ವಾಹನ ಸೇರಿದಂತೆ ಒಟ್ಟು 2 ಲಕ್ಷ ಮೊತ್ತದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

- Advertisement -

Latest News

error: Content is protected !!