Thursday, June 4, 2026
Homeಇತರಬೆಂಕಿ ಆಕಸ್ಮಿಕದಲ್ಲಿ ಪತಿ ಪತ್ನಿ ಸಾವು, ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಯ್ತು ಪತ್ನಿ ಹೆಣ್ಣೇ ಅಲ್ಲಾ ಅನ್ನೋ...

ಬೆಂಕಿ ಆಕಸ್ಮಿಕದಲ್ಲಿ ಪತಿ ಪತ್ನಿ ಸಾವು, ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಯ್ತು ಪತ್ನಿ ಹೆಣ್ಣೇ ಅಲ್ಲಾ ಅನ್ನೋ ರಹಸ್ಯ…

- Advertisement -
- Advertisement -

ಮಧ್ಯಪ್ರದೇಶ :  ಮಧ್ಯಪ್ರದೇಶದ ಸೆಹೊರ್​ ಜಿಲ್ಲೆಯಲ್ಲಿ  ಜನರು ಅಚ್ಚರಿಪಡುವಂತಹ ಘಟನೆಯೊಂದು ನಡೆದಿದೆ. ಇಲ್ಲಿನ ಗ್ರಾಮವೊಂದರಲ್ಲಿ ಇತ್ತೀಚೆಗೆ ಕುಟುಂಬವೊಂದರಲ್ಲಿ ಪತಿ ಹಾಗೂ ಪತ್ನಿ ನಡುವೆ ಜಗಳವಾಗಿದೆ.  ಮನನೊಂದ ಪತ್ನಿ ಬೆಂಕಿ ಹಚ್ಚಿಕೊಂಡಿದ್ದಳು. ರಕ್ಷಿಸಲು ಯತ್ನಿಸಿದ ಪತಿಗೂ ಬೆಂಕಿ ತಗುಲಿ ಇಬ್ಬರು ಸುಟ್ಟ ಗಾಯಗಳಿಂದ ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಆಸ್ಪತ್ರೆಗೆ ದಾಖಲಿಸಿದಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು.

ಆದರೆ ಇಬ್ಬರ ಮರಣೋತ್ತರ ಪರೀಕ್ಷೆ ನಡೆಸಿ, ವೈದ್ಯರು ನೀಡಿದ ವರದಿಯನ್ನು ನೋಡಿದ ಪೊಲೀಸರಿಗೆ ಅಕ್ಷರಶಃ ಅಚ್ಚರಿಯೇ ಎದುರಾಗಿತ್ತು. ಇಬ್ಬರು ಪುರುಷರು ಮದುವೆಯಾಗಿ ರಹಸ್ಯವಾಗಿಯೇ ಮಗುವೊಂದನ್ನು ದತ್ತ ಪಡೆದು ಪತಿ-ಪತ್ನಿಯ ರೀತಿಯಲ್ಲಿ ವಾಸಿಸುತ್ತಿದ್ದರು ಎಂಬ ಭಯಾಯಕ ಸತ್ಯ ಬಹಿರಂಗವಾಗಿದೆ.

ಪತ್ನಿ ಎನಿಸಿಕೊಂಡವಳು ಮಹಿಳೆಯೇ ಅಲ್ಲ. ಅವನೊಬ್ಬ ಪುರುಷನಾಗಿದ್ದ. ಪೊಲೀಸರು ಹೇಳುವ ಪ್ರಕಾರ ಶುಜಲ್ಪುರ್​ ನಿವಾಸಿ ವಿಕ್ರಮ್​ ಸಿಂಗ್​ ಮೇವಾಡ ಎಂಬಾತ ಕಲಪಿಪಾಲ್​ ಭೇಸ್ವಾ ಎಂಬಲ್ಲಿ ವಾಸವಿದ್ದ ದೇವ್​ ಕುನ್ವಾರ್​ ಯುವಕನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದ. ಇಬ್ಬರ ನಡುವೆ ಪ್ರೇಮವು ಆಗಿತ್ತು. ಇಬ್ಬರು ಒಟ್ಟಿಗೆ ಜೀವಿಸಲು 2012ರಲ್ಲಿ ನಿರ್ಧಾರ ಮಾಡಿದ್ದರು. ಇಬ್ಬರು ಮದೆಯಾದ ಬಳಿಕ ಸೆಹೊರ್​ನಲ್ಲಿ ವಾಸಿಸಲು ಶುರು ಮಾಡಿದರು.

ವಿಕ್ರಮ್​ ಸಿಂಗ್​  ದೇವ್ ಕುನ್ವಾರ್ ಹೆಣ್ಣು ಎಂದು ಹೇಳಿ ಕುಟುಂಬದವರನ್ನು ಒಪ್ಪಿಸಿ ಮದುವೆಯಾಗಿದ್ದ. ಇದಾದ ಎರಡು ವರ್ಷಗಳ ಬಳಿಕ ವಿಕ್ರಮ್​ ಕುಟುಂಬ ಮಗುವಿಗಾಗಿ ಬೇಡಿಕೆ ಇಟ್ಟಾಗ ಮಗುವನ್ನು ದತ್ತು ಪಡೆದುಕೊಂಡಿದ್ದರು. ಆದರೆ ಇತ್ತೀಚೆಗೆ ಇಬ್ಬರ ನಡುವೆ ಉಂಟಾದ ಜಗಳ ಸಾವಿನಲ್ಲಿ ಅಂತ್ಯಗೊಂಡಿತ್ತು. ಇಬ್ಬರ ಮರಣೋತ್ತರ ಪರೀಕ್ಷೆ ವೇಳೆ ಇವರು ಸಲಿಂಗ ದಂಪತಿ ಅನ್ನೋದು ಬಯಲಾಗಿದೆ.

- Advertisement -

Latest News

error: Content is protected !!