Friday, June 5, 2026
Homeಉದ್ಯಮಏರ್​ ಇಂಡಿಯಾ ಸರ್ವರ್​ ಮೇಲೆ ಸೈಬರ್​ ದಾಳಿ : ಬರೋಬ್ಬರಿ 45 ಲಕ್ಷ ಗ್ರಾಹಕರ ಕ್ರೆಡಿಟ್...

ಏರ್​ ಇಂಡಿಯಾ ಸರ್ವರ್​ ಮೇಲೆ ಸೈಬರ್​ ದಾಳಿ : ಬರೋಬ್ಬರಿ 45 ಲಕ್ಷ ಗ್ರಾಹಕರ ಕ್ರೆಡಿಟ್ ಕಾರ್ಡ್, ಪಾಸ್ಪೋರ್ಟ್ ಮಾಹಿತಿ ಸೋರಿಕೆ

- Advertisement -
- Advertisement -

ನವದೆಹಲಿ: ರಾಷ್ಟ್ರೀಯ ವಿಮಾನ ಸಂಸ್ಥೆ ಏರ್​ ಇಂಡಿಯಾದ ಸರ್ವರ್​ ಮೇಲೆ ನಡೆದ ಸೈಬರ್​ ದಾಳಿಯಿಂದಾಗಿ ಭಾರೀ ಪ್ರಮಾಣದಲ್ಲಿ ದತ್ತಾಂಶ ಸೋರಿಕೆಯಾಗಿದ್ದು, ಏರ್​ ಇಂಡಿಯಾದ ಸುಮಾರು 4.5 ಮಿಲಿಯನ್​ ಗ್ರಾಹಕರ ಮೇಲೆ ಪರಿಣಾಮ ಬೀರಿದೆ.


ಇದರಿಂದಾಗಿ 45 ಲಕ್ಷ ಪ್ರಯಾಣಿಕರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ. 2011ರ ಆಗಸ್ಟ್ 26 ರಿಂದ 2021 ರ ಪ್ರಬ್ರವರಿ 26 ನಡುವೆ ನೋಂದಾವಣೆ ಮಾಡಿದ ಪ್ರಯಾಣಿಕರ ಹೆಸರು, ಸಂಪರ್ಕ, ಪಾಸ್ಪೋರ್ಟ್ ಮಾಹಿತಿ, ಟಿಕೆಟ್ ವಿವರ, ಕ್ರೆಡಿಟ್ ಕಾರ್ಡ್ ಗಳ ಮಾಹಿತಿ ಸೋರಿಕೆಯಾಗಿದೆ ಎಂದು ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ತಿಳಿಸಿದೆ.
ಈ ನಡುವೆ ಕ್ರೆಡಿಟ್ ಕಾರ್ಡ್ ಹೊಂದಿದವರ ಸಿವಿವಿ ಮಾಹಿತಿಯನ್ನು ಸಿಟಾ PSS ನಲ್ಲಿ ಸಂಗ್ರಹಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಪ್ರಯಾಣಿಕರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವ ಮತ್ತು ಸಂಸ್ಕರಿಸುವ ಜವಾಬ್ದಾರಿ ಹೊಂದಿದ ಸಿಟಾ ಸರ್ವರ್ ಸೈಬರ್ ದಾಳಿಗೆ ತುತ್ತಾಗಿ ವಿಶ್ವದ ಸುಮಾರು 45 ಲಕ್ಷ ಪ್ರಯಾಣಿಕರ ಡೇಟಾ ಸೋರಿಕೆಯಾಗಿದೆ ಎಂದು ಏರ್ ಇಂಡಿಯಾ ತಿಳಿಸಿದ್ದು, ಘಟನೆಗೆ ಸಂಬಂಧಿಸಿದಂತೆ ತನಿಖೆ ಕೈಗೊಳ್ಳಲಾಗಿದೆ. ದಾಳಿಗೊಳಗಾದ ಸರ್ವರ್ ಗಳನ್ನು ಸರಿಪಡಿಸಲಾಗಿದೆ. ಪರಿಶೀಲನೆಗಾಗಿ ಬಾಹ್ಯ ತಜ್ಞರನ್ನು ನಿಯೋಜಿಸಲಾಗಿದ್ದು, ಕ್ರೆಡಿಟ್ ಕಾರ್ಡ್ ಸೋರಿಕೆಯಾದ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡುವಂತೆ ಕ್ರೆಡಿಟ್ ಕಾರ್ಡ್ ನೀಡಿದ ಬ್ಯಾಂಕುಗಳಿಗೆ ತಿಳಿಸಲಾಗಿದೆ. ಏರ್ ಇಂಡಿಯಾ ವೆಬ್ಸೈಟ್ ನಲ್ಲಿ ಅಥವಾ ಬೇರೆ ಕಡೆ ಅನ್ವಯವಾಗುವಂತಹ ಪಾಸ್ವರ್ಡ್ ಗಳನ್ನು ಹೊಂದಿದ್ದರೆ ಬದಲಾಯಿಸಿಕೊಳ್ಳುವಂತೆ ಗ್ರಾಹಕರಿಗೆ ಏರ್ ಇಂಡಿಯಾ ಮನವಿ ಮಾಡಿದೆ.

- Advertisement -

Latest News

error: Content is protected !!