Thursday, June 4, 2026
Homeಇತರಕೊರೊನಾ ಕರ್ಫ್ಯೂ ಉಲ್ಲಂಘನೆ :ಪೊಲೀಸ್ ಲಾಠಿ ಏಟಿಗೆ 17 ವರ್ಷದ ಬಾಲಕ ಸಾವು

ಕೊರೊನಾ ಕರ್ಫ್ಯೂ ಉಲ್ಲಂಘನೆ :ಪೊಲೀಸ್ ಲಾಠಿ ಏಟಿಗೆ 17 ವರ್ಷದ ಬಾಲಕ ಸಾವು

- Advertisement -
- Advertisement -

ಲಕ್ನೋ : ರಾಜ್ಯದಲ್ಲಿ ನಡೆಯುತ್ತಿರುವ ‘ಕೊರೊನಾ ಕರ್ಫ್ಯೂ’ ಅನ್ನು ‘ಉಲ್ಲಂಘಿಸಿದ್ದಕ್ಕಾಗಿ’ ಲಕ್ನೋ ಪೊಲೀಸರು ಥಳಿಸಿದ ಪರಿಣಾಮ 17 ವರ್ಷದ ಬಾಲಕ ಶುಕ್ರವಾರ ಮೃತಪಟ್ಟಿದ್ದಾನೆ ಎಂದು ಅವರ ಕುಟುಂಬ ತಿಳಿಸಿದೆ.


ಕರ್ಫ್ಯೂ ನಿಯಮ ಉಲ್ಲಂಘಿಸಿದ್ದಕ್ಕಾಗಿ ಲಾಕಪ್ ಹಾಕಿ ಬಾಲಕನನ್ನು ಮನಬಂದಂತೆ ಥಳಿಸಲಾಗಿತ್ತು. ಬಾಲಕ ಮೃತಪಟ್ಟ ಘಟನೆ ಬೆನ್ನಲ್ಲೇ ,ಕುಟುಂಬದವರ ದೂರಿನ ಮೇಲೆ ಕಾನ್ ಸ್ಟೆಬಲ್ ಒಬ್ಬನನ್ನು ಅಮಾನತುಗೊಳಿಸಲಾಗಿದೆ ಮತ್ತು ಹೋಮ್ ಗಾರ್ಡ್ ಜವಾನನನ್ನು ವಜಾ ಮಾಡಲಾಗಿದೆ.


ಬಾಲಕ ತನ್ನ ಮನೆಯ ಹೊರಗೆ ತರಕಾರಿ ಮಾರಾಟ ಮಾಡುತ್ತಿದ್ದಾಗ ಬಂಗರ್ಮೌ ಪ್ರದೇಶದ ಭಟ್ಪುರಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಬಾಲಕನ ಸಾವಿನಿಂದ ಕೆರಳಿದ ಗ್ರಾಮಸ್ಥರು ತಪ್ಪಿತಸ್ಥ ಪೊಲೀಸರನ್ನು ಕೂಡಲೇ ವಜಾಗೊಳಿಸಬೇಕು ಹಾಗೂ ಮೃತ ಬಾಲಕನ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಲಕ್ನೊದಲ್ಲಿ ಪ್ರತಿಭಟನೆ ನಡೆಸಿದರು.

- Advertisement -

Latest News

error: Content is protected !!