Wednesday, June 3, 2026
Homeತಾಜಾ ಸುದ್ದಿನಾನು ಕೊಲಂಬೊ ಕ್ಯಾಸಿನೋ ಪಾರ್ಟಿಗೆ ಹೋಗಿದ್ದೇನೆ ಎಂದು ಒಪ್ಪಿಕೊಂಡ ಕನ್ನಡದ ಮತ್ತೊಬ್ಬ ನಟಿ

ನಾನು ಕೊಲಂಬೊ ಕ್ಯಾಸಿನೋ ಪಾರ್ಟಿಗೆ ಹೋಗಿದ್ದೇನೆ ಎಂದು ಒಪ್ಪಿಕೊಂಡ ಕನ್ನಡದ ಮತ್ತೊಬ್ಬ ನಟಿ

- Advertisement -
- Advertisement -

ಬೆಂಗಳೂರು: ಡ್ರಗ್ಸ್ ಪ್ರಕರಣದ ಪ್ರಮುಖ ಆರೋಪಿ ಶೇಖ್ ಫಾಝಿಲ್ ಆಯೋಜಿಸುತ್ತಿದ್ದ ಕ್ಯಾಸಿನೋ ಪಾರ್ಟಿಯಲ್ಲಿ ಸ್ಯಾಂಡಲ್ ವುಡ್ ನಟಿ ಐಂದ್ರಿತಾ ರೇ ಕೂಡ ಭಾಗವಹಿಸುತ್ತಿದ್ದರು ಹಾಗೂ ಫಾಝಿಲ್ ಪಾರ್ಟಿಗೆ ಬನ್ನಿ ಎಂದು ಆಹ್ವಾನ ನೀಡುವ ವಿಡಿಯೋ ಬಹಿರಂಗವಾಗಿತ್ತು.

ಈ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿರುವ ಐಂದ್ರಿತಾ, ”ಮೇ ಜರೂರ್ ಆವೂಂಗ” ಎಂಬ ತಮ್ಮ ಹಿಂದಿ ಚಿತ್ರದ ಪ್ರಮೋಷನ್ ಗಾಗಿ ಕೊಲಂಬೊ ಕ್ಯಾಸಿನೋಗೆ ಚಿತ್ರತಂಡದ ಜತೆ ಹೋಗಿದ್ದೆ ನನಗೆ ಫಾಝಿಲ್ ಎಂಬ ವ್ಯಕ್ತಿ ವೈಯಕ್ತಿಕವಾಗಿ ಪರಿಚಯವಿಲ್ಲ ಎಂದು ಹೇಳಿದ್ದಾರೆ.

ಅಲ್ಲಿ ಸಿನಿಮಾ ಪ್ರಮೋಶನ್ ಚೆನ್ನಾಗಿ ಆಗುತ್ತೆ ಅಂತಾ ಹೇಳಿದ್ದರಿಂದ ಚಿತ್ರತಂಡ ನಮ್ಮನ್ನ ಕ್ಯಾಸಿನೋಗೆ ಕಳುಹಿಸಿದ್ದರು. ‘ಮೇ ಜರೂರ್ ಆವೂಂಗಾ’ ಸಿನಿಮಾ ಮಾಡುತ್ತಿರುವಾಗ ಅರ್ಬಾಜ್ ಖಾನ್ ಜೊತೆ ಕ್ಯಾಸಿನೋಗೆ ಹೋಗಿದ್ದೇನೆ. ಈಗಲೂ ಕ್ಯಾಸಿನೋ ಪಾರ್ಟಿಗೆ ತೆರಳಿರುವ ಫೋಟೋಗಳು ನನ್ನ ಇನ್‍ಸ್ಟಾಗ್ರಾಂನಲ್ಲಿವೆ. ಯಾವುದೇ ಫೋಟೋ ಮತ್ತು ವಿಡಿಯೋಗಳನ್ನ ಡಿಲೀಟ್ ಮಾಡಿಲ್ಲ. ಕರೀಷ್ಮಾ ಕಪೂರ್, ಸೊಹೈಲ್ ಖಾನ್, ಅರ್ಬಾಜ್ ಖಾನ್ ಜೊತೆ ನನ್ನ ಜೊತೆ ಬಂದಿದ್ದರು ಎಂದಿದ್ದಾರೆ.

ಇನ್ನು ನಟ ಅರ್ಬಾಜ್ ಖಾನ್ ಅವರ ಹುಟ್ಟುಹಬ್ಬದಂದು ಬೆಂಗಳೂರಿನ ಹೋಟೆಲ್ ನಲ್ಲಿ ಪಾರ್ಟಿ ನಡೆದಿತ್ತು. ಈ ವೇಳೆ ಫಾಝಿಲ್ ಎಂಬುವವರು ಬಂದಿದ್ದರು. ಪಾರ್ಟಿಯಲ್ಲಿ ಸಹಜವಾಗಿ ಎಲ್ಲರೂ ಸೇರಿ ಫೋಟೊ ತೆಗೆಸಿಕೊಂಡಿದ್ದೆವು. ಅದರಲ್ಲಿ ಫಾಝಿಲ್ ಕೂಡ ಇದ್ದ. ಈ ಫೋಟೋಗಳು ನನ್ನ ಬಳಿಯೂ ಇದೆ. ಈ ಪಾರ್ಟಿಗೆ ಮಾಧ್ಯಮದವರು ಬಂದಿದ್ದರು. ನಮಗೆ ಯಾರಿಗೂ ಫಾಝಿಲ್ ಬಗ್ಗೆ ಗೊತ್ತಿರಲಿಲ್ಲ ಎಂದಿದ್ದಾರೆ.

ಪಾರ್ಟಿಯ ವೇಳೆ ಫೋಟೊ ತೆಗೆಯುವಾಗ ಪ್ರತಿಯೊಬ್ಬರ ಹಿನ್ನಲೆ ತಿಳಿದುಕೊಳ್ಳಲು ಆಗುವುದಿಲ್ಲ. ನಮ್ಮ ಜತೆ ಫೋಟೋ ತೆಗೆಸಿಕೊಂಡ ವ್ಯಕ್ತಿ ತಪ್ಪು ಮಾಡಿದ್ದರೆ ನಮ್ಮ ತಪ್ಪು ಏನಿದೆ..? ಈ ಬಗ್ಗೆ ನಮ್ಮನ್ನು ಪ್ರಶ್ನೆ ಮಾಡುವುದು ತಪ್ಪು ಎಂದು ಕಿಡಿಕಾರಿದ್ದಾರೆ.

- Advertisement -

Latest News

error: Content is protected !!