Saturday, May 18, 2024
Homeತಾಜಾ ಸುದ್ದಿರಾಗಿಣಿ ಮೊಬೈಲ್ ನಲ್ಲಿದ್ದ ಆ ಫೋಟೋ ಬಿಚ್ಚಿಟ್ಟಿದೆ ಭಯಾನಕ ಸತ್ಯ

ರಾಗಿಣಿ ಮೊಬೈಲ್ ನಲ್ಲಿದ್ದ ಆ ಫೋಟೋ ಬಿಚ್ಚಿಟ್ಟಿದೆ ಭಯಾನಕ ಸತ್ಯ

spot_img
- Advertisement -
- Advertisement -

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಯಾರ ಬುಡಕ್ಕೆಲ್ಲಾ ಬರುತ್ತೆ ಅಂತಾ ಹೇಳೋದಕ್ಕೆ ಸಾಧ್ಯಾನೇ ಇಲ್ಲ. ಒಂದಷ್ಟು ಮಂದಿ ಎದೆಯಲ್ಲಿ ಕಳೆದೆರಡು ವಾರಗಳಿಂದ ಢವಢವ ಆಗುತ್ತಲೇ ಇದೆ. ಹೀಗಿರುವಾಗಲೇ ರಾಗಿಣಿ ಫೋನ್ ನಲ್ಲಿ ಲಭ್ಯವಾಗಿರೋ ಫೋಟೋ ಒಂದು ಬೆಚ್ಚಿ ಬೀಳಿಸುವ ಸತ್ಯವೊಂದನ್ನು ಬಯಲು ಮಾಡಿದೆ.

ಈ ಡ್ರಗ್ಸ್ ಮಾಫಿಯಾಗೂ ಛೋಟಾ ಮುಂಬೈ ಹುಬ್ಬಳ್ಳಿಗೂ ಲಿಂಕಿದೆ ಎಂಬ ಸಂಗತಿ ಇದೀಗ ಬಯಲಾಗಿದೆ. ಗೋವಾದಲ್ಲಿ ಹುಬ್ಬಳ್ಳಿಯ ಕಾಂಗ್ರೆಸ್ ಮುಖಂಡ ಗಿರೀಶ್ ಗದಿಗೆಪ್ಪಗೌಡರ ಜತೆ ನಟಿ ರಾಗಿಣಿ ದ್ವಿವೇದಿ ಇರುವ ಫೋಟೋಗಳು ರಾಗಿಣಿ ಮೊಬೈಲ್ ನಲ್ಲಿ ಲಭ್ಯವಾಗಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಮುಖಂಡ ಗಿರೀಶ್ ನನ್ನು ವಶಕ್ಕೆ ಪಡೆದು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಅಲ್ಲದೇ ಹುಬ್ಬಳ್ಳಿಯ ಉಣಕಲ್ ನಲ್ಲಿರುವ ಗಿರೀಶ್ ಗದಿಗೆಪ್ಪಗೌಡರ ಮನೆಯನ್ನು ತಪಾಸಣೆ ನಡೆಸಿರುವ ಸಿಸಿಬಿ ಪೊಲೀಸರು ಹಲವು ಮಾಹಿತಿ ಕಲೆ ಹಾಕಿದ್ದಾರೆ. ಇನ್ನು ಗಿರೀಶ್, ಗೋವಾದಲ್ಲಿ ಕ್ಯಾಸಿನೋ ಟೇಬಲ್ ನ್ನು ಖರೀದಿಸಿದ್ದು, ಇಲ್ಲಿ ನಡೆಯುವ ಕ್ಯಾಸಿನೋ ಪಾರ್ಟಿಗೂ ಸ್ಯಾಂಡಲ್ ವುಡ್ ನಟಿ ರಾಗಿಣಿಗೂ ಲಿಂಕಿದೆ ಎನ್ನಲಾಗುತ್ತಿದೆ. ಒಟ್ಟಾರೆ ಸಿಸಿಬಿ ವಶದಲ್ಲಿರುವ ನಟಿ ರಾಗಿಣಿ ಹಾಗೂ ಕಾಂಗ್ರೆಸ್ ಮುಖಂಡನ ವಿಚಾರಣೆಯಿಂದ ಇನ್ನಷ್ಟು ಮಾಹಿತಿಗಳು ಬಯಲಾಗಬೇಕಿದೆ.

- Advertisement -
spot_img

Latest News

error: Content is protected !!