Wednesday, September 2, 2026
Homeಪ್ರಮುಖ-ಸುದ್ದಿಓವರ್‌ಟೇಕ್‌ ಮಾಡಿದ್ದಕ್ಕೆ ಕಿಡ್ನ್ಯಾಪ್ ಮಾಡಿ ಹಲ್ಲೆ ಮಾಡಿದ ನಟ ದುನಿಯಾ ವಿಜಯ್‌ ಪುತ್ರ ಪ್ರಕರಣ; ಸಾಮ್ರಾಟ್...

ಓವರ್‌ಟೇಕ್‌ ಮಾಡಿದ್ದಕ್ಕೆ ಕಿಡ್ನ್ಯಾಪ್ ಮಾಡಿ ಹಲ್ಲೆ ಮಾಡಿದ ನಟ ದುನಿಯಾ ವಿಜಯ್‌ ಪುತ್ರ ಪ್ರಕರಣ; ಸಾಮ್ರಾಟ್ ವಿಜಯ್ ವಿರುದ್ಧ ಗಾಯಾಳು ಮನೀಷ್ ಗಂಭೀರ ಆರೋಪ

- Advertisement -
- Advertisement -

ಬೆಂಗಳೂರು: ನಟ ದುನಿಯಾ ವಿಜಯ್ ಅವರ ಪುತ್ರ ಸಾಮ್ರಾಟ್ ವಿಜಯ್ ವಿರುದ್ಧ ಕಾಲೇಜು ವಿದ್ಯಾರ್ಥಿಯೊಬ್ಬನನ್ನು ಕಿಡ್ನ್ಯಾಪ್ ಮಾಡಿ ತೀವ್ರ ಹಲ್ಲೆ ನಡೆಸಿದ ಗಂಭೀರ ಆರೋಪ ಕೇಳಿಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಗಾಯಾಳು, ಬಿಬಿಎ ಮೊದಲ ವರ್ಷದ ವಿದ್ಯಾರ್ಥಿ ಮನೀಷ್‌ ಪ್ರತಿಕ್ರಿಯಿಸಿದ್ದು, “ಸ್ನೇಹಿತನ ಮನೆಯಿಂದ ಮನೆಗೆ ತೆರಳುತ್ತಿದ್ದಾಗ ಆಕಸ್ಮಿಕವಾಗಿ ಸಾಮ್ರಾಟ್ ಅವರ ಕಾರನ್ನು ಓವರ್‌ಟೇಕ್ ಮಾಡಿದ್ದೆ. ತಮಾಷೆಗೆ ನಡೆದ ಈ ಸಣ್ಣ ವಿಚಾರವನ್ನು ಗಂಭೀರವಾಗಿ ತಗೆದುಕೊಂಡ ಸಾಮ್ರಾಟ್ ವಿಜಯ್ ಹಾಗೂ ತಂಡದವರು ಆರ್.ಆರ್. ನಗರದಲ್ಲಿ ನಮ್ಮ ಕಾರನ್ನು ಚೇಸ್ ಮಾಡಿದ್ದಾರೆ” ಎಂದು ತಿಳಿಸಿದ್ದಾರೆ.

ಈ ಕುರಿತು ಮನೀಷ್ ಪರ ವಕೀಲರು ಮಾತನಾಡಿ, “ಸಫಾರಿ ಕಾರಿನಲ್ಲಿ ಬಂದ ಸಾಮ್ರಾಟ್ ಸೇರಿದಂತೆ ಸುಮಾರು ಆರು ಮಂದಿ ಮನೀಷ್‌ನನ್ನು ಬಲವಂತವಾಗಿ ಕರೆದೊಯ್ದು ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಸಾಮ್ರಾಟ್ ವಿಜಯ್ ಒಳಗೊಂಡಂತೆ ಒಟ್ಟು ಏಳು ಜನರ ವಿರುದ್ಧ ಪೊಲೀಸ್ ದೂರು ದಾಖಲಿಸಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.

- Advertisement -

Latest News

error: Content is protected !!