Tuesday, September 1, 2026
Homeತಾಜಾ ಸುದ್ದಿಕಾರು ಓವರ್‌ಟೇಕ್ ಮಾಡಿದ್ದಕ್ಕೆ ಸಹಪಾಠಿ ಮೇಲೆ ನಟ ದುನಿಯಾ ವಿಜಯ್ ಮಗನಿಂದ ಹಲ್ಲೆ ಆರೋಪ!

ಕಾರು ಓವರ್‌ಟೇಕ್ ಮಾಡಿದ್ದಕ್ಕೆ ಸಹಪಾಠಿ ಮೇಲೆ ನಟ ದುನಿಯಾ ವಿಜಯ್ ಮಗನಿಂದ ಹಲ್ಲೆ ಆರೋಪ!

- Advertisement -
- Advertisement -

ಬೆಂಗಳೂರು: ಕಾರು ಓವರ್‌ಟೇಕ್ ಮಾಡಿದ ಸಣ್ಣ ವಿಚಾರಕ್ಕೆ ನಟ ‘ದುನಿಯಾ’ ವಿಜಯ್ ಪುತ್ರ ಸಾಮ್ರಾಟ್ ತನ್ನ ಕಾಲೇಜು ಸಹಪಾಠಿ ಮೇಲೆಯೇ ಹಲ್ಲೆ ನಡೆಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ನಿನ್ನೆ ಸಂಜೆ ರಾಜರಾಜೇಶ್ವರಿ ನಗರದಲ್ಲಿ ಸಾಮ್ರಾಟ್ ಚಲಾಯಿಸುತ್ತಿದ್ದ ಜಿಪ್ಸಿ ಕಾರನ್ನು ಆತನ ಕಾಲೇಜು ಸಹಪಾಠಿ ಮನೀಶ್ ಗೌಡ ಐ20 ಕಾರಿನಲ್ಲಿ ಓವರ್‌ಟೇಕ್ ಮಾಡಿದ್ದ ಎನ್ನಲಾಗಿದೆ. ಇದೇ ವಿಚಾರಕ್ಕೆ ಇಂದು ಮಧ್ಯಾಹ್ನ ಮೈಸೂರು ರಸ್ತೆಯ ಆರ್‌ವಿ ಯುನಿವರ್ಸಿಟಿ ಹೊರಗಡೆ ಇದ್ದ ಮನೀಶ್‌ನನ್ನು ಬಲವಂತವಾಗಿ ಕಾರಿನಲ್ಲಿ ಎಳೆದೊಯ್ದು ಸಾಮ್ರಾಟ್ ಮತ್ತು ಆತನ ಸ್ನೇಹಿತರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಹಲ್ಲೆಯಿಂದ ಗಾಯಗೊಂಡಿರುವ ಮನೀಶ್ ಗೌಡ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೆಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಕೆಂಗೇರಿ ಪೊಲೀಸರು ಘಟನೆ ನಡೆದ ಸ್ಥಳ ಪರಿಶೀಲನೆ ನಡೆಸುತ್ತಿದ್ದು, ಠಾಣಾ ವ್ಯಾಪ್ತಿ ಖಚಿತಪಡಿಸಿಕೊಂಡು ದೂರು ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ.

- Advertisement -

Latest News

error: Content is protected !!