Saturday, October 17, 2026
Homeತಾಜಾ ಸುದ್ದಿಸಿಎಂ ಬರ ವೀಕ್ಷಣೆ ಪ್ರಹಸನ: ಅಧಿಕಾರಿಗಳು, ಪೊಲೀಸರ ಕಾಲ್ತುಳಿತಕ್ಕೆ ರೈತನ ಸೂರ್ಯಕಾಂತಿ ಬೆಳೆ ನಾಶ!

ಸಿಎಂ ಬರ ವೀಕ್ಷಣೆ ಪ್ರಹಸನ: ಅಧಿಕಾರಿಗಳು, ಪೊಲೀಸರ ಕಾಲ್ತುಳಿತಕ್ಕೆ ರೈತನ ಸೂರ್ಯಕಾಂತಿ ಬೆಳೆ ನಾಶ!

- Advertisement -
- Advertisement -

ಗದಗ: ಮುಖ್ಯಮಂತ್ರಿಗಳ ಬರ ಅಧ್ಯಯನ ಪ್ರವಾಸ ರೈತರ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಗದಗ ತಾಲೂಕಿನ ಕದಾಂಪೂರದಲ್ಲಿ ಸಿಎಂ ಬರ ವೀಕ್ಷಣೆ ಮುಗಿಸಿ ತೆರಳಿದ ಬೆನ್ನಲ್ಲೇ, ಸಚಿವರು, ಅಧಿಕಾರಿಗಳು ಹಾಗೂ ಪೊಲೀಸರ ಕಾಲ್ತುಳಿತಕ್ಕೆ ಜಮೀನಿನಲ್ಲಿದ್ದ ಅಳಿದುಳಿದ ಸೂರ್ಯಕಾಂತಿ ಬೆಳೆ ಸಂಪೂರ್ಣ ನಾಶವಾಗಿದೆ ಎಂದು ಸ್ಥಳೀಯ ರೈತ ಕಣ್ಣೀರಿಟ್ಟಿದ್ದಾರೆ.

ಕದಾಂಪೂರ ಗ್ರಾಮದ ರೈತ ಮಂಜುನಾಥ ಗಾವರವಾಡ ಎಂಬುವವರಿಗೆ ಸೇರಿದ 3 ಎಕರೆ ಜಮೀನಿನಲ್ಲಿ ಬರಗಾಲದ ನಡುವೆಯೂ ಅಲ್ಪಸ್ವಲ್ಪ ಸೂರ್ಯಕಾಂತಿ ಬೆಳೆ ಉಳಿದುಕೊಂಡಿತ್ತು. ಕನಿಷ್ಠ 4 ಕ್ವಿಂಟಾಲ್ ಆದರೂ ಇಳುವರಿ ಬರುವ ಭರವಸೆಯಲ್ಲಿದ್ದ ರೈತನಿಗೆ ಸಿಎಂ ಭೇಟಿ ಕಹಿ ನೆನಪಾಗಿ ಪರಿಣಮಿಸಿದೆ. ಪರಿಶೀಲನೆ ನೆಪದಲ್ಲಿ ಜಮೀನಿಗೆ ನುಗ್ಗಿದ ನೂರಾರು ಜನರ ತುಳಿತಕ್ಕೆ ಸಿಲುಕಿ ಬೆಳೆ ಸಂಪೂರ್ಣ ಹಾಳಾಗಿದೆ.

ಆಗ್ರಹ ಮತ್ತು ಆಕ್ರೋಶ: ಬರ ವೀಕ್ಷಣೆಗೆ ಬಂದ ಮುಖ್ಯಮಂತ್ರಿಗಳು ಜಮೀನಿನ ಮಾಲೀಕನಾದ ನನ್ನೊಂದಿಗೆ ಕನಿಷ್ಠ ಮಾತನಾಡಲೂ ಇಲ್ಲ. ಇದ್ದ ಅಲ್ಪಸ್ವಲ್ಪ ಬೆಳೆಯೂ ಸಿಎಂ ಮತ್ತು ಅಧಿಕಾರಿಗಳ ದಂಡಿನಿಂದಾಗಿ ನಾಶವಾಯಿತು ಎಂದು ರೈತ ಮಂಜುನಾಥ ಗೋಳು ತೋಡಿಕೊಂಡಿದ್ದಾರೆ. ಸರ್ಕಾರದ ಈ ನಡೆಗೆ ಸ್ಥಳೀಯ ರೈತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

- Advertisement -

Latest News

error: Content is protected !!