Sunday, October 18, 2026
Homeಆರಾಧನಾಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮಾಣಿಯಲ್ಲಿ ಸೆಪ್ಟೆಂಬರ್ 4ರಂದು ಮೊಸರು ಕುಡಿಕೆ ಉತ್ಸವ

ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮಾಣಿಯಲ್ಲಿ ಸೆಪ್ಟೆಂಬರ್ 4ರಂದು ಮೊಸರು ಕುಡಿಕೆ ಉತ್ಸವ

- Advertisement -
- Advertisement -

ಬಂಟ್ವಾಳ: ಮಾಣಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಮಾಣಿ ಯುವಕ ಮಂಡಲ ವತಿಯಿಂದ ಮಾಣಿ ಗಾಂಧಿ ಮೈದಾನದಲ್ಲಿ ಸೆಪ್ಟೆಂಬರ್ 4ರಂದು, ಶುಕ್ರವಾರ ಬೆಳಗ್ಗೆ 9 ಗಂಟೆಯಿಂದ `ಮೊಸರು ಕುಡಿಕೆ ಉತ್ಸವ’ ಆಯೋಜಿಸಲಾಗಿದೆ.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶ್ರೀ ಬಿ. ರಮಾನಾಥ ರೈ, ಮಾಜಿ ಸಚಿವರು, ಕರ್ನಾಟಕ ಸರ್ಕಾರ, ಮುಖ್ಯ ಅತಿಥಿಗಳಾಗಿ, ಶ್ರೀ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು, ಶ್ರೀಮತಿ ಮಲ್ಲಿಕಾ ಪಕ್ಕಳ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರು ಶ್ರೀ ಬೇಬಿ ಕುಂದರ್, ಅಧ್ಯಕ್ಷರು, ಬಂಟ್ವಾಳ ನಗರಾಭಿವೃದ್ದಿ ಯೋಜನಾ ಪ್ರಾಧಿಕಾರ, ಶ್ರೀ ಜಗನ್ನಾಥ ಚೌಟ ಬದಿಗುಡ್ಡೆ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರು, ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟರ್ ಸದಸ್ಯ, ಶ್ರೀ ಸುರೇಶ್ ಕುಮಾರ್ ನಾವೂರು ಅವರು ಉಪಸ್ಥಿತರಿರುವರು.

ಸನ್ಮಾನವನ್ನು ಪಡೆಯಲಿರುವವರು; ಶ್ರೀಮತಿ ಗಿರಿಜಾ, ಪಂಚಾಯತ್ ಅಧ್ಯಕ್ಷೆ ಅಧಿಕಾರಿ, ಮಾಣಿ ಗ್ರಾಮ ಪಂಚಾಯತ್, ಶ್ರೀಮತಿ ಚಂದ್ರಾವತಿ, ಮುಖ್ಯೋಪಾಧ್ಯಾಯರು, ಸ.ಹಿ.ಪ್ರಾ ಶಾಲೆ, ಮಾಣಿ ಹಾಗೂ ಶ್ರೀ ತಿಮ್ಮಪ್ಪ ಕೆ., ನಿವೃತ್ತ ಜವಾನ, ಕರ್ನಾಟಕ ಪ್ರೌಢಶಾಲೆ, ಮಾಣಿ

ಶ್ರೀ ಕೃಷ್ಣನಿಗೆ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಬಳಿಕ ಮೊಸರು ಕುಡಿಕೆ ಉತ್ಸವ ಜರುಗಲಿದೆ. ಸಂಜೆ 5 ಗಂಟೆಗೆ ಸಮಾರೋಪ ಕಾರ್ಯಕ್ರಮ ನಡೆಯಲಿದೆ.

ಉತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ಅತಿಥಿಗಳು ಭಾಗವಹಿಸಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

- Advertisement -

Latest News

error: Content is protected !!