Saturday, June 6, 2026
Homeತಾಜಾ ಸುದ್ದಿಸಾಯುವ ಕೆಲವೇ ಸಮಯ ಮುಂಚೆ ನಟ ದುನಿಯಾ ವಿಜಯ್ ತಾಯಿ ನವೀನ್ ಸಜ್ಜು ಹಾಡು ಕೇಳುತ್ತಿದ್ದ...

ಸಾಯುವ ಕೆಲವೇ ಸಮಯ ಮುಂಚೆ ನಟ ದುನಿಯಾ ವಿಜಯ್ ತಾಯಿ ನವೀನ್ ಸಜ್ಜು ಹಾಡು ಕೇಳುತ್ತಿದ್ದ ವಿಡಿಯೋ ವೈರಲ್

- Advertisement -
- Advertisement -

ಬೆಂಗಳೂರು; ಎರಡು ದಿನಗಳ ಹಿಂದೆಯಷ್ಟೇ ನಟ ದುನಿಯಾ ವಿಜಯ್ ತಾಯಿ ವಿಧಿವಶರಾಗಿದ್ದರು. ಕೊರೊನಾಗೆ ತುತ್ತಾಗಿದ್ದ ದುನಿಯಾ ವಿಜಯ್ ತಾಯಿ ನಾರಾಯಣಮ್ಮ  ಗುಣ ಮುಖರಾಗಿ ಮನೆ ಬಂದಿದ್ದರು. ಆದರೆ ಬ್ರೈನ್ ಸ್ಟ್ರೋಕ್ ಆದ ಕಾರಣ ಅವರ ಆರೋಗ್ಯ ಮತ್ತೆ ಹದಗೆಟ್ಟಿತ್ತು. ಚಿಕಿತ್ಸೆ ಫಲಿಸದೇ ನಾರಾಯಣಮ್ಮ ವಿಧಿರಾಗಿದ್ದಾರೆ.

ಇನ್ನು ದುನಿಯಾ ವಿಜಿ ತಾಯಿ ನಿಧನರಾಗುವ ಕೆಲವೇ ತಾಸುಗಳ ಮುಂಚೆ ಗಾಯಕ ನವೀನ್ ಸಜ್ಜು ಅವರ ಹಾಡು ಕೇಳಿದ್ದಾರೆ. ವಿಡಿಯೋ ಕಾಲ್ ಮೂಲಕ ನವೀನ ಸಜ್ಜು ಅವರು ಹಾಡಿರುವ ಒಳಿತ ಮಾಡು ಮನುಸ ಹಾಡು ಹಾಡಿದ್ದಾರೆ. ದುನಿಯಾ ವಿಜಯ್ ತಾಯಿ ಈ ಹಾಡು ತುಂಬಾನೇ ಇಷ್ಟವಂತೆ. ನವೀನ್ ಸಜ್ಜು ಅವರ ಮನೆಗೆ ಹೋದಾಗಲೆಲ್ಲಾ ಈ ಹಾಡು ಹಾಡೋದಕ್ಕೆ ಹೇಳುತ್ತಿದ್ದರಂತೆ. ಅದರಂತೆ ಮೊನ್ನೆಯೂ ನವೀನ್ ಸಜ್ಜು ಹಾಡು ಹಾಡಿದ್ದಾರೆ.

ಇನ್ನು ಈ ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ.

- Advertisement -

Latest News

error: Content is protected !!